ಬೆಂಗಳೂರು : ರಾಜ್ಯ ಸರ್ಕಾರವು ಎಸ್ ಟಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಮೂಲಕ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳ ಅಸಮಾಧಾನ ಶಮನಗೊಳಿಸಿದ್ದು, ಇಂದು ವಿಧಾನಸೌಧದಲ್ಲಿ ಸ್ವಾಮೀಜಿಗಳ ಉಪಸ್ಥಿತಿಯಲ್ಲೇ ಅದ್ಧೂರಿ ಮಹರ್ಷಿ ವಾಲ್ಮೀಕಿ ಜಯಂತಿ ನಡೆಸಲು ಸಜ್ಜಾಗಿದೆ.
BIG NEWS : ಇಂದು ಭಾರತದ ಮೊದಲ ʻಸೌರಶಕ್ತಿ ಚಾಲಿತ ಗ್ರಾಮʼ ಗುಜರಾತ್ನ ʻಮೊಧೇರಾʼ ಎಂದು ಘೋಷಿಸಲಿರುವ ಪ್ರಧಾನಿ ಮೋದಿ
2022 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಜನ ಸಾಧಕರು ಆಯ್ಕೆಯಾಗಿದ್ದಾರೆ. ಈ ಸಾಧಕರಿಗೆ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.
Rain In Karnataka : ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ : 14 ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ
ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ
ಸಾಮಾಜಿಕ ಕ್ಷೇತ್ರದಿಂದ ಬೆಂಗಳೂರಿನ ಎನ್ ಮುನಿಸ್ವಾಮಿ
ಕೃಷಿ ಕ್ಷೇತ್ರದಿಂದ ಚಿಕ್ಕಬಳ್ಳಾಪುರದ ಜಿ.ಎನ್.ನಾಗಪ್ಪ
ಬೆಳಗಾವಿಯ ಸಮಾಜ ಸೇವಕ ನಾಗಪ್ಪ ಎಚ್.ಕೋಣಿ
ಕಲಬುರಗಿಯ ರಂಗ ಕಲಾವಿದೆ ಪಿ.ಪದ್ಮಾ
ಮೈಸೂರಿನ ಸಮಾಜ ಸೇವಕ ಎಸ್. ಎಚ್ ಸುಭಾಷ್
ಕಲೆ ಮತ್ತು ಸಮಾಜ ಸೇವೆ ಕ್ಷೇತ್ರದಿಂದ ಬಳ್ಳಾರಿಯ ಉಷಾರಾಣಿ ಅವರನ್ನು ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 5 ಲಕ್ಷ ರೂ. ನಗದು ಹಾಗೂ 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.