ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದ್ದು, ಸಂಬಂಧಿಕರ ಮನೆಗೆ ಬಂದಿದ್ದ ಇಬ್ಬರು ಮಹಿಳೆಯರಿಗೆ ಜನರು ಥಳಿಸಿದ ಘಟನೆ ನಡೆದಿದೆ.
BIGG NEWS : ಗ್ರಾಹಕರೇ ಗಮನಿಸಿ : ನಿಮ್ಮ ಮನೆಗಳಿಗೆ ತಲುಪಲಿದೆ ಬೆಸ್ಕಾಂನ `ಉಚಿತ ಡಿಜಿಟಲ್ ವಿದ್ಯುತ್ ಮೀಟರ್’
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮಕ್ಕೆ ತೆಲಂಗಾಣದ ಕೊತ್ಲಾಪುರ ಗ್ರಾಮದಿಂದ ಇಬ್ಬರು ಮಹಿಳೆಯರು ಪೋಲಕಪಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಅವರನ್ನು ನೋಡಿ ಅನುಮಾನಿಸಿದ ಜನರು ಮಕ್ಕಳ ಕಳ್ಳರೆಂದು ಭಾವಿಸಿ ಥಳಿಸಿದ್ದಾರೆ.
ಮಹಿಳೆಯರನ್ನು ಥಳಿಸಿದ ಗ್ರಾಮಸ್ಥರು ಬಳಿಕ ಮಹಿಳೆಯರನ್ನು ಚಿಂಚೋಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರು ಮಹಿಳೆಯರು ಸಂಬಂಧಿಕರ ಮನೆಗೆ ಬಂದಿರುವುದು ಎಂದು ತಿಳಿದುಬಂದಿದೆ.