ದಕ್ಷಿಣ ಕನ್ನಡ : ಕಡಬ ತಾಲೂಕಿನ ಯೇನೆಕಲ್ಲಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಇಬ್ಬರು ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
Viral news : ಲೈಂಗಿಕ ಕಿರುಕುಳದಿಂದ ಪಾರಾಗಲು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿದ ಬಾಲಕಿ ವಿಡಿಯೋ| WATCH
ಯೇನೆಕಲ್ಲಿನ ಮುಖ್ಯರಸ್ತೆಯ ಸೇತುವೆಯ ಕೆಳಭಾಗದಲ್ಲಿ ಹೊಳೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಧರ್ಮಪಾಲ (46) ಹಾಗೂ ಚೊಕ್ಕಾಡಿಯ ಬೆಳ್ಳಪ್ಪ (49) ಎಂದು ಗುರುತಿಸಲಾಗಿದೆ.
ಹೊಳೆಯಲ್ಲಿದ್ದ ಪಂಪಿನ ಪೂಟ್ ವಾಲ್ ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆಂದು ಶಂಕಿಸಲಾಗಿದ್ದು, ಸದ್ಯ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ. ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS : ಬೆಂಗಳೂರಿನಲ್ಲಿ ಚಿತ್ರನಟಿ ಕಂ ಮಾಡೆಲ್ ಗೆ ಲೈಂಗಿಕ ದೌರ್ಜನ್ಯ : ಚಾಲಕನ ವಿರುದ್ಧ `FIR’ ದಾಖಲು