ನವದೆಹಲಿ : ಟ್ವಿಟ್ಟರ್’ನಿಂದ ವಜಾಗೊಂಡ ಮಾಜಿ ಉದ್ಯೋಗಿಗಳಿಗೆ ಸ್ವದೇಶಿ ಪ್ರತಿಸ್ಪರ್ಧಿ ಕೂ(Koo) ಭರ್ಜರಿ ಆಫರ್ ನೀಡಿದ್ದು, ತಮ್ಮ ಸಂಸ್ಥೆಗೆ ಸ್ವಾಗತಿಸಿದೆ. ಉದ್ಯೋಗಿಗಳಿಗೆ ಕೂ ಸಹ–ಸಂಸ್ಥಾಪಕ ಮಯಾಂಕ್ ಬಿದಾವತ್ಕಾ ಈ ಮುಕ್ತ ಆಹ್ವಾನ ನೀಡಿದ್ದಾರೆ.
ಇನ್ನು ಮೈಕ್ರೋ ಬ್ಲಾಗಿಂಗ್ ಸೈಟ್’ನಲ್ಲಿ #RIPTwitter ಟ್ರೆಂಡಿಂಗ್ ಮಾಡಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತ್ರ, ಬಿದಾವತ್ಕಾ ಮಾಜಿ ಟ್ವಿಟರ್ ಉದ್ಯೋಗಿಗಳನ್ನ ನೇಮಿಸಿಕೊಳ್ಳುವ ಇಂಗಿತವನ್ನ ವ್ಯಕ್ತಪಡಿಸಿದರು.
ಅಂದ್ಹಾಗೆ, ದೀರ್ಘ ಗಂಟೆಗಳ ಕಾಲ ಸೈನ್ ಅಪ್ ಮಾಡುವಂತೆ ಸಿಬ್ಬಂದಿಯನ್ನ ಮಸ್ಕ್ ಒತ್ತಾಯಿಸಿ ಮೇಲ್ ಮಾಡಿದ ನಂತ್ರ ಟ್ವಿಟರ್ ಉದ್ಯೋಗಿಗಳ ಸಾಮೂಹಿಕ ನಿರ್ಗಮನವನ್ನ ನೋಡುತ್ತಿದೆ.
“#RIPTwitter ಮತ್ತು ಇದಕ್ಕೆ ಸಂಬಂಧಿಸಿದ # ಕಡಿಮೆಯಾಗುತ್ತಿರುವುದನ್ನ ನೋಡಿ ತುಂಬಾ ದುಃಖವಾಗಿದೆ. ನಾವು ನಮ್ಮ ದೊಡ್ಡ, ಮುಂದಿನ ಸುತ್ತನ್ನ ವಿಸ್ತರಿಸುತ್ತಾ ಹೋದಂತೆ ಈ ಟ್ವಿಟರ್ ಮಾಜಿ ಉದ್ಯೋಗಿಗಳಲ್ಲಿ ಕೆಲವರನ್ನು ನೇಮಿಸಿಕೊಳ್ಳುತ್ತೇವೆ. ಅವ್ರು ತಮ್ಮ ಪ್ರತಿಭೆಗೆ ಬೆಲೆ ನೀಡುವ ಸ್ಥಳದಲ್ಲಿ ಕೆಲಸ ಮಾಡಲು ಅರ್ಹರು. ಮೈಕ್ರೋ–ಬ್ಲಾಗಿಂಗ್ ಜನರ ಶಕ್ತಿ. ದಬ್ಬಾಳಿಕೆ ಅಲ್ಲ” ಎಂದು ಬಿದಾವತ್ಕಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
Very sad to see #RIPTwitter and related # to this going down.
We'll hire some of these Twitter ex-employees as we keep expanding and raise our larger, next round.
They deserve to work where their talent is valued. Micro-blogging is about people power. Not suppression.
— Mayank Bidawatka (@mayankbidawatka) November 18, 2022
ಅಂದ್ಹಾಗೆ, 10 ಭಾಷೆಗಳನ್ನ ಬೆಂಬಲಿಸುವ ಟ್ವಿಟರ್ ಪ್ರತಿಸ್ಪರ್ಧಿ ಕೂ, ಇತ್ತೀಚೆಗೆ 50 ಮಿಲಿಯನ್ ಡೌನ್ಲೋಡ್ಗಳನ್ನ ದಾಟಿದೆ ಎಂದು ಘೋಷಿಸಿದೆ. ಪ್ರಸ್ತುತ, ಕೂ ಯುಎಸ್, ಯುಕೆ, ಸಿಂಗಾಪುರ್, ಕೆನಡಾ, ನೈಜೀರಿಯಾ, ಯುಎಇ, ಅಲ್ಜೀರಿಯಾ, ನೇಪಾಳ, ಇರಾನ್ ಮತ್ತು ಭಾರತ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಬಿಡುಗಡೆಯಾದಾಗಿನಿಂದ, ಕೂ ಪ್ಲಾಟ್ಫಾರ್ಮ್’ನಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನ ಹೆಚ್ಚಿಸಲು 7,500ಕ್ಕೂ ಹೆಚ್ಚು ಯೆಲ್ಲೋ ಟಿಕ್ಸ್ ಮತ್ತು ಒಂದು ಲಕ್ಷ ಹಸಿರು ಸ್ವಯಂ–ಪರಿಶೀಲನೆ ಟಿಕ್ಗಳನ್ನ ನೀಡಿದೆ ಎಂದು ಕಂಪನಿ ಇತ್ತೀಚೆಗೆ ತಿಳಿಸಿದೆ.
BIGG NEWS : ‘PSI’ ನೇಮಕಾತಿ ಹಗರಣ : 11 ಮಂದಿ ಆರೋಪಿಗಳಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು |PSI Scam
BIG NEWS: ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯನ್ನು ತುಂಡು ತುಂಡಾಗಿ ಕತ್ತರಿಸಿದ ಪಾಗಲ್ ಪ್ರೇಮಿ
VIRAL NEWS : ‘ಸೋಶಿಯಲ್ ಮೀಡಿಯಾ’ದಲ್ಲಿ ಜನ ಮೆಚ್ಚುಗೆಗೆ ಪಾತ್ರವಾಯ್ತು ಸಚಿವ ‘ಕೋಟಾ ಶ್ರೀನಿವಾಸ್ ಪೂಜಾರಿ’ಯ ನಡೆ..!