ಮಡಿಕೇರಿ :ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ತಗ್ಗಿದ್ದು, ಇದೀಗ ಮತ್ತೆ ಭೂಕಂಪನದ ಆತಂಕ ಎದುರಾಗಿದ್ದು, ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವಾಗಿದೆ.
BREAKING NEWS : ಸ್ವಾತಂತ್ರ್ಯೋವ ಭಾಷಣದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ `ಪಂಚ ಪ್ರಾಣ’ಗಳು
ಭಾನುವಾರ ಸಂಜೆ ಭಾರಿ ಶಬ್ದದೊಂದಿಗೆ ಭೂಕಂಪನದ ಅನುಭವವಾಗಿದ್ದು, ಭಯಭೀತರಾಗಿ ಜನರು ಮನೆಗಳಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ. ಕೊಯನಾಡಿನ ಮಂಗಳಪಾರೆ ಬಳಿ ಮತ್ತು ಸುಳ್ಯ ಭಾಗದ ಹಲವು ಗ್ರಾಮಗಳಿಗೆ ಭೂಕಂಪನವಾಗಿದೆ. ಸುಳ್ಯದ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದೆ. ಕೊಲ್ಲಮೊಗ್ರದವರೆಗೂ ಈ ಶಬ್ದ ಕೇಳಿಸಿದೆ ಎನ್ನಲಾಗಿದೆ.
ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಭೂಮಿ ಕಂಪಿಸಿದೆ. ಕಳೆದ ಕೆಲವು ತಿಂಗಳ ಹಿಂದೆ ಸುಳ್ಯ ತಾಲೂಕಿನಲ್ಲಿ ಸುಮಾರು 7 ರಿಂದ 8 ಬಾರಿ ಭೂಮಿ ಕಂಪಿಸಿತ್ತು.