ಬಳ್ಳಾರಿ: ದೀಪಾವಳಿ ಹಿನ್ನಲೆಯಲ್ಲಿ ಸಾಲು ಸಾಲು ರಜೆಯ ಕಾರಣದಿಂದಾಗಿ ತಮ್ಮ ಊರಿಗೆ ಜನರು ಹಬ್ಬಕ್ಕೆ ತೆರಳೋದು ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವಂತ ಖಾಸಗೀ ಬಸ್ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗೆ ದುಪ್ಪಟ್ಟು ಹಣ ವಸೂಲಿ ಮಾಡಿದ್ರೇ ಬಸ್ ಪರ್ಮಿಟ್ ರದ್ದುಗೊಳಿಸಲಾಗುತ್ತದೆ ( Bus Permit Cancel ) ಎಂಬುದಾಗಿ ಸಾರಿಗೆ ಸಚಿವ ಬಿ ಶ್ರೀರಾಮುಲು (Minister B Sriramulu ) ಖಡಕ್ ಎಚ್ಚರಿಕೆ ನೀಡಿದ್ದಾರೆ.
BIGG NEWS: ಗದಗನಲ್ಲಿ ಏಕಾಏಕಿ ಕುಸಿದ ಭೂಮಿ, ಅಲ್ಲಿಂದಲೇ ಉಕ್ಕಿ ಹರಿದಿದೆ ನೀರು; ನೋಡಲು ಮುಗಿಬಿದ್ದ ಜನರು
ಬಳ್ಳಾರಿ ನಗರದಲ್ಲಿ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರೋ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಬಸ್ ಮಾಲೀಕರ ವಿರುದ್ಧ ಕೇಸ್ ಕೂಡ ದಾಖಲಿಸಲಾಗುತ್ತದೆ. ಅಲ್ಲದೇ ಬಸ್ ಪರ್ಮಿಟ್ ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.
BIG NEWS: ಬೀದಿ ನಾಯಿಗಳಿಗೆ ನೀವು ಆಹಾರ ನೀಡಲು ಬಯಸಿದ್ರೆ, ಅವುಗಳನ್ನು ದತ್ತು ತೆಗೆದುಕೊಳ್ಳಿ: ಬಾಂಬೆ ಹೈಕೋರ್ಟ್
ಈಗಾಗಲೇ ಖಾಸಗಿ ಬಸ್ ನವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಬಗ್ಗೆ ಪರಿಶೀಲಿಸೋದಕ್ಕೆ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಆ ಅಧಿಕಾರಿಗಳು ಖಾಸಗಿ ಬಸ್ ಗಳಲ್ಲಿ ಪ್ರಯಾಣಿಸುವಂತ ಪ್ರಯಾಣಿಕರಿಂದ ಮಾಹಿತಿ ಪಡೆಯಲಿದ್ದಾರೆ. ಹೆಚ್ಚಿನ ಹಣ ವಸೂಲಿ ಮಾಡಿದ್ರೇ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
BIGG NEWS: ಗೆಳೆಯನ ಸಾವಿಗೆ ಕಂಬನಿ ಮಿಡಿದ ಸಿಎಂ; ಮಾಮನಿ ಅಗಲಿಕೆಗೆ ಹಲವು ಗಣ್ಯರ ಸಂತಾಪ