ಕೊಪ್ಪಳ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಹಳ್ಳ ದಾಟುವಾಗ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
BIGG NEWS : ಸರ್ಕಾರಿ ಕಚೇರಿಗಳಿಗೆ `ಪ್ರೀಪೇಯ್ಡ್ ವಿದ್ಯುತ್ ಮೀಟರ್’ ಅಳವಡಿಕೆ : ಇಂಧನ ಸಚಿವ ವಿ.ಸುನೀಲ್ ಕುಮಾರ್
ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದಲ್ಲಿ ಕೆಲಸದಿಂದ ಮರಳುವಾಗ ನೀರಿನ ರಭಸ ಗ್ರಹಿಸದೆ ನಾಲ್ವರು ಮಹಿಳೆಯರು ಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ.
ಗಿರಿಜಾ ಮಾಲಿಪಾಟೀಲ್(32), ಭುವನೇಶ್ವರಿ ಪೊಲೀಸ್ ಪಾಟೀಲ್(40), ಪವಿತ್ರಾ ಪೊಲೀಸ್ ಪಾಟೀಲ್(45) ಮತ್ತು ವೀಣಾ ಮಾಲಿಪಾಟೀಲ್(19) ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ದುರ್ದೈವಿಗಳು. ಗಿರಿಜಾ ಮತ್ತು ಭುವನೇಶ್ವರಿ ಹಳ್ಳದಲ್ಲಿನ ಗಿಡ ಹಿಡಿದುಕೊಂಡಿದ್ದರು. ಗ್ರಾಮಸ್ಥರು ರಕ್ಷಿಸಲು ಮುಂದಾಗುವ ವೇಳೆಗೆ ಕೊಚ್ಚಿಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದಾರೆ.