ಗೋರಖ್ ಪುರ : ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಸ್ವಾಮೀಜಿ ಎಂದು ಹೇಳಿಕೊಂಡು ತಿರುಗುತ್ತಿದ್ದ ನಕಲಿ ಬಾಬಾ ಮೂವರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದ್ರಂತೆ, ಈ ಕಾಮಿ ತಾನು ಸ್ವಾಮಿ ಎಂದು ಹೇಳಿಕೊಂಡು ಒಂದೇ ಕುಟುಂಬದ ಮೂವರು ಮಹಿಳೆಯರ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ. ಪೊಲೀಸರ ಪ್ರಕಾರ, ಕಂಪರ್ಗಂಜ್ ಗ್ರಾಮದ ಒಂದೇ ಕುಟುಂಬದಲ್ಲಿ ಐದು ಜನರು ಸಾವನ್ನಪ್ಪಿದ ನಂತ್ರ ಮಹಿಳೆಯರು ನಕಲಿ ಬಾಬಾ ಶ್ಯಾಮ್ ಬಿಹಾರಿಯನ್ನ ಸಂಪರ್ಕಿಸಿದ್ದಾರೆ.
ನಕಲಿ ಬಾಬಾ ರಾತ್ರಿ ಮಹಿಳೆಯರನ್ನ ಕರೆದು ಡ್ರಗ್ಸ್ ನೀಡಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ. ಆತ ಮಹಿಳೆಯರಿಗೆ ನಿಮ್ಮ ಕುಟುಂಬಕ್ಕೆ ಅಂಟಿದ ಶಾಪವನ್ನ ಕಳೆಯುತ್ತೇವೆ ಎಂದು ಹೇಳಿ ಅವರಿಂದ 60 ಸಾವಿರ ವಸೂಲಿ ಮಾಡಿದ್ದಾನೆ.
ಇನ್ನು ನಕಲಿ ಬಾಬಾ ಆ ಮೂವರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆಯರಿಗೆ ತಿಳಿದಾಗ, ಅವರು ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಧ್ಯ ನಕಲಿ ಬಾಬಾನನ್ನ ಪೊಲೀಸರು ಬಂಧಿಸಿದ್ದಾರೆ.