ಕಲಬುರಗಿ : ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿಲ್ಲಾ. ಬದಲಾಗಿ ಇದು ಟ್ರಬಲ್ ಇಂಜಿನ್ ಸರ್ಕಾರವಾಗಿದೆ. ರಾಜ್ಯದಲ್ಲಿ ನಡೆದಿರೋ ಹಗರಣಗಳ ಬಗ್ಗೆ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿಲ್ಲಾ. ಬದಲಾಗಿ ಇದು ಟ್ರಬಲ್ ಇಂಜಿನ್ ಸರ್ಕಾರವಾಗಿದೆ. ರಾಜ್ಯದಲ್ಲಿ ನಡೆದಿರೋ ಹಗರಣಗಳ ಬಗ್ಗೆ ಚರ್ಚೆಗೆ ಬರಲಿ. ನಾವು ಹೇಳಿರೋ ಹಗರಣಗಳ ಬಗ್ಗೆ ಮಾತಾಡೋ ಧಮ್, ತಾಕತ್ ಬಿಜೆಪಿಯವರಿಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮೇಲಿಂದ ಮೇಲೆ ರಾಜ್ಯಕ್ಕೆ ಮೋದಿ ಬರ್ತಿದ್ದಾರೆ. ಧರ್ಮದ, ಜಾತಿಯ ರಾಜಕಾರಣ ಮಾಡಬೇಕು ಅಂತ ಬಿಜೆಪಿಯವರು ಅಂದುಕೊಂಡಿದ್ದರು. ಆದ್ರೆ ರಾಜ್ಯದಲ್ಲಿ ಅದು ವಿಫಲವಾಗಿದೆ. ಮೋದಿಗೆ ರಾಜ್ಯದಲ್ಲಿ ಹೇಗಾದ್ರೂ ಮಾಡಿ ಚುನಾವಣೆ ಗೆಲ್ಲಬೇಕು. ದಿನದ 24 ಗಂಟೆಯೂ ಮೋದಿ ಚುನಾವಣೆ ಬಗ್ಗೆ ಯೋಚಿಸುತ್ತಾರೆ. ಚುನಾವಣೆ ಹತ್ತಿರವಾದ ಹಿನ್ನೆಲೆ ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ. ಪೇ ಸಿಎಂ ನಿಂದ ಬಿಜೆಪಿಯವರಿಗೆ ಹೊರಗಡೆ ಬರಲು ಆಗ್ತಿಲ್ಲಾ. ಆರ್ಎಸ್ಎಸ್ ನವರು ಏನು ಹೇಳ್ತಾರೋ ಅದನ್ನು ಮಾಡುತ್ತಿದ್ದಾರೆ.