ಮಂಡ್ಯ : ಸ್ಥಳೀಯ ಶಾಸಕರು ಕಮಿಷನ್ ಪಡಿತಿದ್ದಾರೆ ಇದು 500ರಷ್ಟು ನಿಜಾ ಎಂದಿದ್ದ ಸಂಸದೆ ಸುಮಲತಾ ಆರೋಪಕ್ಕೆ ಮದ್ದೂರಿನ ಶಾಸಕ ಡಿ.ಸಿ. ತಮ್ಮಣ್ಣ ಸುಮಲತಾ ವಿರುದ್ಧ ಕಿಡಿಕಾರಿದ್ದಾರೆ.
BIGG NEWS : ಮಹಿಳೆ ವಿರುದ್ಧ ಅರವಿಂದ ಲಿಂಬಾವಳಿ ದರ್ಪ ಪ್ರಕರಣ : ಕರೆ ಮಾಡಿ ಮಾಹಿತಿ ಪಡೆದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಲತಾ ಏನ್ ಸತ್ಯಹರಿಶ್ವಂದ್ರ ಅಲ್ಲಾ, ಕಮಿಷನ್ ಆರೋಪದ ಬಗ್ಗೆ ಸುಮಲತಾ ಯಾವುದಾದರೂ ಸಾಕ್ಷಿ ಇದ್ದರೆ ಕೊಡಲಿ. ನಮಗೆ ಸುಮಲತಾ ಬಂಡಾವಳ ಎಲ್ಲವೂ ಗೊತ್ತಿದೆ.ಇವರು ಗಣಿ ವಿಚಾರವಾಗಿ ಧ್ವನಿ ಎತ್ತಿದಾಗ ಏನ್ ಕೇಳಿದ್ರು ಅನ್ನೋದು ಎಲ್ಲೆಡೆ ಹರಿದಾಡಿದೆ. ಯಾತಕ್ಕಾಗಿ ಇವರು ಗಣಿ ವಿರೋಧ ಮಾಡ್ತಿದ್ದಾರೆ ಎಂದು ಎಲ್ಲೆಡೆ ಹರಿದಾಡ್ತು. ಗಣಿಗಾರಿಕೆ ವಿರೋಧ ಮಾಡಿದ್ರಲ್ಲಾ ಸಂಪೂರ್ಣವಾಗಿ ನಿಲ್ಲಿಸಿದ್ರಾ? ಎಲ್ಲಾ ನಾನೆ ಮಾಡಿದ್ದೀನಿ ಅಂತ ಅವರು ಕ್ರೆಡಿಟ್ ತಗೋಳೊದು ನಮಗೆ ಗೊತ್ತಿದೆ, ಪ್ರಜ್ಞಾವಂತರಿಗೆ ಯಾರು ಏನು ಮಾಡ್ತಾರೆ ಅಂತ ಗೊತ್ತಿದೆ ಎಂದು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ʻಆ ಒಂದು ಪದʼ ಬಳಸಲು ನಾಚಿ ನೀರಾದ ʻರಾಹುಲ್ ದ್ರಾವಿಡ್ʼ!… ವಿಡಿಯೋ ವೈರಲ್
ಸುಮಲತಾ ಏನ್ ತಗಂಡಿಲ್ವಾ? ಉದಾಹರಣೆ ಕೊಡ್ಲಾ? ನಮ್ಮತ್ರನು ದಾಖಲೆ ಇದೆ ಬೇಕು ಅಂದ್ರೆ ಕೊಡ್ತಿವಿ. ನಾವು ಅವರಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ನಾವು ಕಮಿಷನ್ ಪಡೆದಿರುವುದಕ್ಕೆ ಸಾಕ್ಷಿ ಇದ್ದರೆ ತರಲಿ.ಈ ರೀತಿ ರಾಜಕಾರಣ ಮಾಡೋದು ರಾಜಕಾರಣಿಗಳ ಲಕ್ಷಣ ಅಲ್ಲಾ. ಬೇಕಿದ್ದರೆ ಈ ಬಗ್ಗೆ ತನಿಖೆ ನಡೆಸಲಿ.ನನ್ನ 20 ವರ್ಷದ ರಾಜಕೀಯದಲ್ಲಿ ಯಾರ್ ಯಾರ್ ಏನು ಅಂತ ಗೊತ್ತಿದೆ. ಅವರಂತೆ ನಾವು ಕೆಸರೆರಚಲು ಹೋಗಲ್ಲ. ನಾನು ಸತ್ಯ ಹರಿಶ್ಚಂದ್ರನಾ ಅಂತ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚೆರ್ಚೆಗೆ ಸುಮಲತಾ ಯಾವಾಗ ಬೇಕಾದರು ಬರಲಿ ನಾನು ಸಿದ್ದ. ಇವರ ಆಪಾದನೆಗೆ ಎದರಿ ಮನೆಯಲ್ಲಿ ಕುಳಿತುಕೊಳ್ಳುವ ಜನ ನಾವಲ್ಲ. ಬುಡುಬುಡುಕೆ ಮಾಡಿಕೊಂಡು ರಾಜಕಾರಣಕ್ಕೆ ಬಂದಿಲ್ಲ. ನಾವು ತಪ್ಪು ಮಾಡಿದ್ದೇವೆ ಎಂದು ನಿರೂಪಿಸಿದರೆ ರಾಜಕೀಯದಿಂದ ನಿವೃತ್ತಿಯಾಗ್ತಿನಿ ಎಂದು ಸವಾಲು ಹಾಕಿದ್ದಾರೆ.