ಬೆಂಗಳೂರು : ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಾಮಾನ ಭಾರೀ ಕುಸಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿ ಹೆಚ್ಚಳವಾಗಿದೆ.
ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ರಾಜ್ಯದ ಶೇ. 73 ರಷ್ಟು ಭೂ ಭಾಗದಲ್ಲಿ 12 ರಿಂ ದ16 ಡಿಗ್ರಿ ಸೆಲ್ಸಿಯಸ್ ತನಕ ಕನಿಷ್ಟ ತಾಪಮಾನ ದಾಖಲಾಗಿದೆ.
ಬೆಂಗಳೂರಲ್ಲಿ ಕೆಲವು ದಿನಗಳ ಹಿಂದೆ ಕನಿಷ್ಠ ತಾಪಮಾನ 19ರಿಂದ 20ಡಿಗ್ರಿ ಸೆಲ್ಸಿಯಸ್ ಇದ್ದದ್ದು, ಎರಡು ದಿನದಿಂದ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಿದೆ. ಇದರಿಂದ ಬೆಳಗ್ಗೆ ಮಂಜು ಕವಿದ ವಾತಾವರಣ ಉಂಟಾಗುವ ಜೊತೆಗೆ ಚಳಿಯು ಹೆಚ್ಚಾಗುತ್ತಿದೆ. ಅಕ್ಟೋಬರ್ 28 ಶುಕ್ರವಾರದವರೆಗೆ ಇದೇ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
ಅಕ್ಟೋಬರ್ 28ರ ನಂತರ ಬೆಂಗಳೂರಲ್ಲಿ ಮತ್ತೆ ಹಗುರದಿಂದ ಸಾಧಾರಣವಾದ ಮಳೆಯ ಸುರಿಯುವ ಸಾಧ್ಯತೆ ಇದ್ದು, ಈ ವೇಳೆ ಮೋಡ ಕವಿದ ವಾತಾವರಣ ಕಂಡು ಬರಲಿದೆ. ನೈರುತ್ಯ ಮಾರುತಗಳ ಬೀಸುವಿಕೆ ಬಹುತೇಕ ಮುಗಿದಿದ್ದು, ಈಶಾನ್ಯ ಭಾಗದಿಂದ ಗಾಳಿ ಬೀಸುವಿಕೆ ಆರಂಭವಾಗಿದೆ ಎನ್ನಲಾಗಿದೆ.
ಸ್ವೆಟರ್ ಗಾಗಿ ಅಂಗಲಾಚಿದ ಮಕ್ಕಳು
ರಾಜ್ಯದಲ್ಲಿ ಇನ್ನೇನು ಚಳಿಗಾಲ ಶುರುವಾಯ್ತು. ಈ ಮಧ್ಯೆ ಶಾಲೆಗಳಿಗೆ ಮಕ್ಕಳು ಹೋಗುತ್ತಿದ್ದಾರೆ. ಹೀಗಾಗಿ ಅವರು ಪಾಲಿಕೆ ಅಧಿಕಾರಿಗಳಿಗೆ ಬಿಬಿಎಂಪಿ ಶಾಲಾ ಮಕ್ಕಳು ಸ್ವೆಟರ್ಸ್ ಗಾಗಿ ಅಂಗಲಾಚುತ್ತಿದ್ದಾರೆ.ಆದರೆ ಅವರು ಮಾತ್ರ ಕೇಳಿದ್ರೂ ಕೇಳಾದ ಹಾಗೆ ವರ್ತಿಸುತ್ತಿದ್ದಾರೆ. ಸ್ವೆಟರ್ಸ್ ಕೊಡದೆ ಅದರ ಹಣವನ್ನು ಪೋಷಕರ ಖಾತೆಗೆ ಜಮಾ ಮಾಡಲು ಮುಂದಾಗಿರುವ ಬಿಬಿಎಂಪಿ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಚಳಿಗಾಲ ಸಮೀಪಿಸುತ್ತಿದೆ. ಹಿಂದೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಸ್ವೆಟರ್ಸ್ಗಷಳು ಹಾಳಾಗಿ ಮೂಲೆ ಸೇರಿವೆ. ಮಕ್ಕಳು ನಡುಗುತ್ತಾ ಶಾಲೆಗೆ ಬರಬೇಕಾಗಿದೆ. ಇಷ್ಟಾದರೂ ಬಿಬಿಎಂಪಿ ಮಾತ್ರ ಶಾಲಾ ಮಕ್ಕಳಿಗೆ ಸ್ವೆಟರ್ಸ್ ವಿತರಣೆಗೆ ಗಮನ ಕೊಡದೆ ಕಾಲಹರಣ ಮಾಡ್ತಿದೆ. ಅರ್ಧ ವರ್ಷವೇ ಮುಗಿದ್ರೂ ಸಿಗದ ಸ್ವೆಟರ್ಸ್ ಗಳಿಗಾಗಿ 25 ಸಾವಿರ ಮಕ್ಕಳು ಜಾತಕಪಕ್ಷಿಗಳಂತಾಗಿದ್ದಾರೆ. ಶಾಲೆಗಳತ್ತ ಹೋದ್ರೆ ಸಾಕು, ನಮಗೆ ಸ್ವೆಟರ್ಸ್ ಕೊಡಿ ಸರ್, ಪ್ಲೀಸ್..ಪ್ಲೀಸ್.. ಎಂದು ಅಂಗಲಾಚುತ್ತಿದ್ದಾರೆ.
ಚಳಿಗಾಲ ಶುರುವಾದ್ರೂ ಬಿಬಿಎಂಪಿ ಶಾಲೆಯ ಬರೋಬ್ಬರಿ 25 ಸಾವಿರ ಮಕ್ಕಳಿಗೆ ಇನ್ನೂ ಸ್ವೆಟರ್ಸ್ ವಿತರಣೆಯಾಗಿಲ್ಲ. ಸ್ವೆಟರ್ಸ್ ವಿತರಣೆಯಲ್ಲಿ ಸೃಷ್ಟಿಯಾಗಿರುವ ಗೊಂದಲಕ್ಕೆ ಪರಿಹಾರವೇನು? ಎಂದು ಕೇಳಿದ್ರೆ ಹೊಸದೊಂದು ಪ್ಲಾನ್ ಹಾಕ್ಕೊಂಡು ಕೂತಿದ್ದೇವೆ ಅಂತಾರೆ ಪಾಲಿಕೆ ಅಧಿಕಾರಿಗಳು.ಮಕ್ಕಳ ಪೋಷಕರ ಖಾತೆಗೆ ಸ್ವೆಟರ್ಸ್ಗೆಾ ನಿಗದಿಯಾಗಿರುವಷ್ಟು ಹಣವನ್ನು ಜಮಾ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳುತ್ತಾರೆ.
ಯಾವುದೇ ಪುರಾವೆಗಳಿಲ್ಲದೆ ಗಂಡನನ್ನು ಪತ್ನಿ ಕುಡುಕ ಎಂದು ಕರೆಯುವುದು ಕ್ರೂರಕ್ಕೆ ಸಮಾನ: ಹೈಕೋರ್ಟ್ ಮಹತ್ವದ ಅಭಿಪ್ರಾಯ