ನವದೆಹಲಿ : ಸಾಲ ಅಪ್ಲಿಕೇಶನ್ಗಳ ದುಷ್ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅನೇಕ ಜನರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಿರುಕುಳ ನೀಡುತ್ತಿರುವ ಈ ಲೋನ್ ಅಪ್ಲಿಕೇಶನ್ಳನ್ನ ಹತ್ತಿಕ್ಕಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಇದಕ್ಕಾಗಿ ಕ್ರಮಗಳನ್ನ ತೆಗೆದುಕೊಂಡಿದೆ.
ಉನ್ನತ ಮಟ್ಟದ ಮೀಟಿಂಗ್.!
ಅಕ್ರಮ ಲೋನ್ ಅಪ್ಲಿಕೇಶನ್ಗಳನ್ನ ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಕ್ರಮ ಕೈಗೊಳ್ಳಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವ್ರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಅದ್ರಂತೆ ಸಧ್ಯ ಈ ಅಕ್ರಮ ಸಾಲ ಅಪ್ಲಿಕೇಶನ್ʼಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ವೈಟ್ ಲಿಸ್ಟ್.!
ಕಾನೂನುಬದ್ಧ ಅಪ್ಲಿಕೇಶನ್ಗಳ ವೈಟ್ಲಿಸ್ಟ್ ಸಿದ್ಧಪಡಿಸುವಂತೆ ಕೇಂದ್ರವು ಆರ್ಬಿಐಗೆ ನಿರ್ದೇಶನ ನೀಡಿದೆ. ಬಿಳಿ ಪಟ್ಟಿಯಲ್ಲಿರುವ ಸಾಲದ ಅಪ್ಲಿಕೇಶನ್ಗಳನ್ನ ಮಾತ್ರ ಅಪ್ಲಿಕೇಶನ್ ಸ್ಟೋರ್ಗಳಲ್ಲಿ ಹೋಸ್ಟ್ ಮಾಡಲಾಗುತ್ತದೆ ಅನ್ನೋದನ್ನ ಖಚಿತಪಡಿಸಿಕೊಳ್ಳಲು ಕೇಂದ್ರವು ಕ್ರಮಗಳನ್ನ ತೆಗೆದುಕೊಳ್ಳಲು ನಿರ್ಧರಿಸಿದೆ. ಇಡಿ ಮತ್ತು ಸಿಬಿಐ ಅಕ್ರಮ ಲೋನ್ ಅಪ್ಲಿಕೇಶನ್ಗಳ ವಹಿವಾಟಿನ ಮೇಲೆ ಗಮನ ಹರಿಸಲು ನಿರ್ಧರಿಸಿವೆ. ಅಕ್ರಮ ಸಾಲ ಅಪ್ಲಿಕೇಶನ್ಗಳ ಆಟವನ್ನು ತಡೆಯಲು ಎಲ್ಲಾ ಸಚಿವಾಲಯಗಳು ಮತ್ತು ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಸಭೆಯಲ್ಲಿ ಕೇಂದ್ರ ಸೂಚಿಸಿದೆ.