ಬೆಂಗಳೂರು : ನವೆಂಬರ್ ನಲ್ಲಿ ನಡೆದಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 3.21 ಲಕ್ಷ ಅಭ್ಯರ್ಥಿಗಳ ಪೈಕಿ 61,927 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. 1 ರಿಂದ 5 ನೇ ತರಗತಿ ಬೋಧನೆಗೆ ನವೆಂಬರ್ 6 ರಂದು ಪತ್ರಿಕೆ-1 ಪರೀಕ್ಷೆ ನಡೆದಿದ್ದು, 1,50,790 ಅಭ್ಯರ್ಥಿಗಳು ಹಾಜರಾಗಿ, 20,070 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. 6 ರಿಂದ 8 ನೇ ತರಗತಿವರೆಗೆ ನಡೆದಿದ್ದ ಪತ್ರಿಕೆ-2 ರಲ್ಲಿ 1,92,066 ಅಭ್ಯರ್ಥಿಗಳು ಹಾಜರಾಗಿ 41,857 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
ಇನ್ನು ಅಭ್ಯರ್ಥಿಗಳಿಗೆ ಮುದ್ರಿತ ಅಂಕಪಟ್ಟಿಗಳನ್ನು ವಿತರಿಸುವುದಿಲ್ಲ. ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ವೆಬ್ ಸೈಟ್ ನಲ್ಲಿ ನೀಡುವ https://schooleducation.kar.nic.in ಲಿಂಗ್ ಮೂಲಕ ಗಣಕೀಕೃತ ಪ್ರಮಾಣಪತ್ರವನ್ನು ಪಡೆಯಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.