ಕೆಎನ್ಎನ್ಡಿಜಿಟಲ್ ಡೆಸ್ಕ್ : ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಜೂನ್ನಲ್ಲಿ ಪಾಕಿಸ್ತಾನ ಸರ್ಕಾರದೊಂದಿಗೆ ಸಹಿ ಹಾಕಿದ್ದ ಅನಿರ್ದಿಷ್ಟ ಕದನ ವಿರಾಮ ಒಪ್ಪಂದವನ್ನ ರದ್ದುಗೊಳಿಸಿದೆ . ಇದರೊಂದಿಗೆ ಪಾಕಿಸ್ತಾನದಾದ್ಯಂತ ದಾಳಿ ನಡೆಸುವಂತೆ ತಾಲಿಬಾನ್ ತನ್ನ ಯೋಧರಿಗೆ ಆದೇಶ ನೀಡಿದೆ.
ಭಯೋತ್ಪಾದಕ ಸಂಘಟನೆಯು ಮುಜಾಹಿದ್ದೀನ್ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳನ್ನ ಉಲ್ಲೇಖಿಸಿದ್ದು, ದೇಶಾದ್ಯಂತ ಎಲ್ಲಿ ಬೇಕಾದರೂ ದಾಳಿ ನಡೆಸಲು ತನ್ನ ಹೋರಾಟಗಾರರಿಗೆ ಕೇಳಿಕೊಂಡಿದೆ. ಅದ್ರಂತೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಉಗ್ರ ಸಂಘಟನೆಯಿಂದ ಈ ಎಚ್ಚರಿಕೆ ಬಂದಿದೆ.
ಭಯೋತ್ಪಾದಕ ಸಂಘಟನೆಯು ಎಚ್ಚರಿಕೆ ನೀಡಿದ್ದು, ವಿವಿಧ ಪ್ರದೇಶಗಳಲ್ಲಿ ಮುಜಾಹಿದ್ದೀನ್ (ಉಗ್ರಗಾಮಿಗಳು) ವಿರುದ್ಧ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ, ಆದ್ದರಿಂದ ನೀವು ದೇಶದಾದ್ಯಂತ ಎಲ್ಲಿ ಸಾಧ್ಯವೋ ಅಲ್ಲಿ ದಾಳಿ ಮಾಡುವುದು ನಿಮಗೆ ಅನಿವಾರ್ಯವಾಗಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡವು 17 ವರ್ಷಗಳ ನಂತ್ರ ಪಾಕಿಸ್ತಾನಕ್ಕೆ ತಲುಪಿದ ಒಂದು ದಿನದ ನಂತ್ರ ಈ ಹೇಳಿಕೆಯನ್ನ ನೀಡಲಾಗಿದೆ. ಇನ್ನು ಸೇನಾ ಮುಖ್ಯಸ್ಥ ಜನರಲ್ ಬಜ್ವಾ ನವೆಂಬರ್ 29 ಮಂಗಳವಾರ ನಿವೃತ್ತರಾಗಲಿದ್ದಾರೆ.
ಸೇನೆ ನಿರಂತರವಾಗಿ ದಾಳಿ ನಡೆಸುತ್ತಿದೆ ಎಂದ ಭಯೋತ್ಪಾದಕ ಸಂಘಟನೆ.!
ಟಿಟಿಪಿಯನ್ನು ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯುತ್ತಾರೆ. ಟಿಟಿಪಿನ್ನು 2007 ರಲ್ಲಿ ವಿವಿಧ ಉಗ್ರಗಾಮಿ ಸಂಘಟನೆಗಳ ಜಂಟಿ ಗುಂಪಾಗಿ ರಚಿಸಲಾಯಿತು. ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಬನ್ನು ಮತ್ತು ಲಕ್ಕಿ ಮಾರ್ವತ್ ಪ್ರದೇಶಗಳಲ್ಲಿ ಮಿಲಿಟಿಯಾ ಗುಂಪುಗಳು ಆಗಾಗ್ಗೆ ದಾಳಿ ನಡೆಸಿದ ನಂತರ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ನಿಷೇಧಿತ ಗುಂಪು ಹೇಳಿದೆ. ಕದನ ವಿರಾಮ ಉಲ್ಲಂಘನೆಯ ಬಗ್ಗೆ ಜನರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಸಂವಾದ ಪ್ರಕ್ರಿಯೆಗೆ ಸ್ವಲ್ಪವೂ ಅಡ್ಡಿಯಾಗದಂತೆ ತಾಳ್ಮೆ ತೋರಿಸಿದೆ ಎಂದು ಹೇಳಿಕೆ ತಿಳಿಸಿದೆ.
ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ನಿರಂತರ ದಾಳಿಯನ್ನ ನಿಲ್ಲಿಸಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈಗ ದೇಶದಾದ್ಯಂತ ನಮ್ಮ ಪ್ರತಿದಾಳಿ ಆರಂಭವಾಗಲಿದೆ. ಟಿಟಿಪಿ ಹೇಳಿಕೆ ಕುರಿತು ಸರ್ಕಾರ ಮತ್ತು ಗುಪ್ತಚರ ಸಂಸ್ಥೆಗಳಿಂದ ಇದುವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರದ ಸಹಾಯದಿಂದ ಪಾಕಿಸ್ತಾನ ಸರ್ಕಾರ ಕಳೆದ ವರ್ಷ TTP ಯೊಂದಿಗೆ ಮಾತುಕತೆಯನ್ನು ಪ್ರಾರಂಭಿಸಿತ್ತು, ಆದರೆ ಯಾವುದೇ ಪ್ರಗತಿಯನ್ನು ಸಾಧಿಸಲಾಗಲಿಲ್ಲ.
ಮಲಾಲಾ ಮೇಲೆ ದಾಳಿ ನಡೆಸಿದ್ದ ಟಿಪಿಪಿ.!
ಗಮನಾರ್ಹವಾಗಿ, 2012ರಲ್ಲಿ, ಮಲಾಲಾ ಯೂಸುಫ್ಜಾಯ್ ಅವರು ಟಿಟಿಪಿಯಿಂದ ದಾಳಿಗೊಳಗಾದರು. ಇದರಿಂದಾಗಿ ಮಲಾಲಾ ಬುಲೆಟ್ನಿಂದ ಗಾಯಗೊಂಡು, ಮೊದಲು ಪೇಶಾವರದ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಚಿಕಿತ್ಸೆಗಾಗಿ ಲಂಡನ್ಗೆ ಕರೆದೊಯ್ಯಲಾಯಿತು. ಈ ದಾಳಿಯ ಹೊಣೆ ಹೊತ್ತುಕೊಂಡ ಟಿಟಿಪಿ ಮಲಾಲಾ ಪಾಶ್ಚಿಮಾತ್ಯ ಮನೋಭಾವದ ಹುಡುಗಿ ಎಂದು ಹೇಳಿತ್ತು. ನಂತರ ಮಲಾಲಾ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು.
‘ದಿ ಕಾಶ್ಮೀರ್ ಫೈಲ್ಸ್’ ಒಂದು ʻಅಸಭ್ಯʼ ಚಿತ್ರವೆಂದ ಐಎಫ್ಎಫ್ಐ ಜ್ಯೂರಿ ಮುಖ್ಯಸ್ಥ
BIGG NEWS : ಕೇರಳ ಮೂಲದ ಯುವತಿ ಮೇಲೆ ಬೆಂಗಳೂರಲ್ಲಿ ಗ್ಯಾಂಗ್ ರೇಪ್ : ಕೃತ್ಯಕ್ಕೆ ಆರೋಪಿಗಳ ಗೆಳತಿಯಿಂದಲೂ ಸಾಥ್
BIGG NEWS : ದಾವಣಗೆರೆಯಲ್ಲಿ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡ “ಕಲ್ಕಿ” ಟಗರು, ವಿಶೇಷತೆಗಳೇನು? ಇಲ್ಲಿದೆ ಓದಿ