ಹಾವೇರಿ : ಅಂತಿಮ ವರ್ಷದ ಪದವಿ, ಡಿಪ್ಲೋಮಾ, ಸ್ನಾತಕೋತ್ತರ, ವೃತ್ತಿಪರ ಕೋರ್ಸ್, ಸಂಜೆ ಕಾಲೇಜು, ಕಾನೂನು ವಿದ್ಯಾರ್ಥಿಗಳ ಪರೀಕ್ಷೆಗಳು ಬಾಕಿ ಇರುವದರಿಂದ ವಿದ್ಯಾರ್ಥಿಗಳಿಗೆ ತರಗತಿ ಪರೀಕ್ಷೆಗಳಿಗೆ ಹಾಜರಾಗಲು ಅವಧಿ ವಿಸ್ತರಿಸಿಕೊಂಡ ರಶೀದಿ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಪಾಸುಗಳನ್ನು ತೋರಿಸಿ ಅಕ್ಟೋಬರ್ 31 ರ ವರೆಗೆ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
BIGG NEWS : ಕಲಬುರಗಿಯಲ್ಲಿ ಹೆಚ್ಚಾದ ಮಕ್ಕಳ ಕಳ್ಳರ ವದಂತಿ : ಇಬ್ಬರು ಮಹಿಳೆಯರನ್ನು ಥಳಿಸಿದ ಗ್ರಾಮಸ್ಥರು
ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳ ಚಾಲ್ತಿ ಬಸ್ ಪಾಸ್ ಮಾನ್ಯತಾ ಅವಧಿಯು ದಿನಾಂಕ 30-09-2022 ಕ್ಕೆ ಮುಕ್ತಾಯಗೊಳ್ಳುತ್ತಿರುವದರಿಂದ ನಿಗದಿತ ದಿನಾಂಕದ ನಂತರ ಸದರಿ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗುವದಿಲ್ಲ. ಆದಷ್ಟು ಬೇಗ ಸೇವಾಸಿಂಧು ಆನ್ಲೈನ್ ಪೋರ್ಟ್ಲ್ ಮುಖಾಂತರ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯಲು ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿದೆ.
BIGG NEWS : ಗ್ರಾಹಕರೇ ಗಮನಿಸಿ : ನಿಮ್ಮ ಮನೆಗಳಿಗೆ ತಲುಪಲಿದೆ ಬೆಸ್ಕಾಂನ `ಉಚಿತ ಡಿಜಿಟಲ್ ವಿದ್ಯುತ್ ಮೀಟರ್’