ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಾಶ್ಮೀರಿ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಭಜನೆಗಳನ್ನ ಹಾಡುವ ಮತ್ತು ಸೂರ್ಯ ನಮಸ್ಕಾರ ಮಾಡುವ ಆಚರಣೆಗಳನ್ನ ನಿಷೇಧಿಸುವಂತೆ ಮುತ್ತಹಿದ್ ಮಜ್ಲಿಸ್-ಎ-ಉಲೇಮಾ (MMU) ಸಂಘಟನೆ ಆಗ್ರಹಿಸಿದೆ.
ಕಣಿವೆಯಲ್ಲಿ ಹಿಂದುತ್ವದ ಅಜೆಂಡಾವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಜಾರಿಗೆ ತರುತ್ತಿರುವ ಚಟುವಟಿಕೆಗಳನ್ನ ನಿಲ್ಲಿಸಬೇಕು ಎಂದು ಸಂಘಟನೆ ಹೇಳಿದೆ. ಅಂದ್ಹಾಗೆ, ಎಂಎಂಯು ಸುಮಾರು 30 ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಂಘಟನೆಯಾಗಿದೆ.
ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಹಿಂದೂ ಧಾರ್ಮಿಕ ಗೀತೆಗಳನ್ನ ಹಾಡಲು ಮತ್ತು ಸೂರ್ಯ ನಮಸ್ಕಾರ ಮಾಡಲು ಕೇಳಲಾಗುತ್ತಿದೆ ಎಂದು ಎಂಎಂಯು ಹೇಳಿಕೆಯಲ್ಲಿ ತಿಳಿಸಿದೆ.ಇದು ಕಾಶ್ಮೀರದ ಮುಸ್ಲಿಂ ಗುರುತನ್ನ ದುರ್ಬಲಗೊಳಿಸುವ ದುರದೃಷ್ಟಕರ ಪ್ರಯತ್ನವಾಗಿದೆ. ಈ ಸಂಬಂಧ ಶ್ರೀನಗರದ ಜಾಮಾ ಮಸೀದಿಯಲ್ಲಿ ಸಭೆ ನಡೆಸಿದ್ದೇವೆ. ಈ ಸುಗ್ರೀವಾಜ್ಞೆಗಳು ಮುಸ್ಲಿಮರ ಧಾರ್ಮಿಕ ಭಾವನೆಗಳನ್ನ ಘಾಸಿಗೊಳಿಸುತ್ತದೆ ಮತ್ತು ಅವರಲ್ಲಿ ಅಸಮಾಧಾನವನ್ನ ಉಂಟುಮಾಡುತ್ತದೆ ಎಂದು ಅದು ಹೇಳಿದೆ.
‘ವ್ಯಾಲಿ ಆಫ್ ಸೇಂಟ್ಸ್’ ಮುಸ್ಲಿಂ ಅಸ್ಮಿತೆಯನ್ನ ದುರ್ಬಲಗೊಳಿಸಲಾಗುತ್ತಿದೆ’ ಎಂದು ಸಂಘಟನೆಯು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನ ಅಂಗೀಕರಿಸಲಾಯಿತು ಮತ್ತು ‘ಸಂತರ ಕಣಿವೆ’ ಮುಸ್ಲಿಂ ಅಸ್ಮಿತೆ ದುರ್ಬಲಗೊಳ್ಳುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂತಹ ಚಟುವಟಿಕೆಗಳನ್ನ ಆದಷ್ಟು ಬೇಗ ನಿಲ್ಲಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದಿದೆ.
ಇತ್ತೀಚೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ‘ರಘುಪತಿ ರಾಘವ್ ರಾಜಾ ರಾಮ್’ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಉಲ್ಲೇಖಾರ್ಹ. ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನ ಅಸ್ಲಾಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರೆ, ಅವರು ತಮ್ಮ ಮಕ್ಕಳನ್ನ ಈ ಶಾಲೆಗಳಿಂದ ಹೊರತಂದು ಖಾಸಗಿ ಶಾಲೆಗಳಿಗೆ ಸೇರಿಸಬೇಕು ಎಂದು ಎಂಎಂಯು ಪೋಷಕರನ್ನ ಒತ್ತಾಯಿಸಿದೆ.