ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ದಳವನ್ನು (ACB) ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
BIGG NEWS : `ಮಡಿಕೇರಿ ಚಲೋ’ ಮುಂದೂಡಿಕೆ : ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಬಿಎಸ್ ವೈ ಅಭಿನಂದನೆ
ರಾಜ್ಯ ಸರ್ಕಾರದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ಸಿ.ಜೆ. ರಮಣ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. ಆಗಸ್ಟ್ 11 ರಂದು ಎಸಿಬಿಯನ್ನು ರದ್ದು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಕಾಂಗ್ರೆಸ್ ನ ಸರ್ಕಾರ ಅಧಿಕಾರದಲ್ಲಿದ್ದಂತ ಸಂದರ್ಭದಲ್ಲಿ ಕರ್ನಾಟಕ ಎಸಿಬಿ ರಚನೆ ಮಾಡಿ ಆದೇಶಿಸಿತ್ತು. ಈ ಮೂಲಕ ಲೋಕಾಯುಕ್ತ ಪೊಲೀಸ್ ಗಿಂತಲೂ ಹೆಚ್ಚಿನ ಅಧಿಕಾರವನ್ನು ಎಸಿಬಿಗೆ ನೀಡಿತ್ತು. ಆಗ ಸಿಎಂ ಆಗಿದ್ದಂತ ಸಿದ್ಧರಾಮಯ್ಯ ಅವರು ಎಸಿಬಿ ರಚನೆ ಮಾಡಿ ಆದೇಶಿಸಿದ್ದರು.