ಬೆಂಗಳೂರು : ರಾಜ್ಯ ಸರ್ಕಾರವು ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗೆ ಇಲಾಖಾ ಮುಂಬಡ್ತಿ ಸಭೆ ಆಯೋಜಿಸದಂತೆ ಸೂಚನೆ ನೀಡಲಾಗಿದ್ದ ಸುತ್ತೋಲೆಯನ್ನು ಹಿಂಪಡೆದಿದೆ.
ಹೆಂಡ್ತಿ ಸಾಯಿಸಲು ಗೂಗಲ್ನಲ್ಲಿ ಸರ್ಚ್ ಮಾಡಿದ ಗಂಡ…! ಮುಂದೆನಾಯ್ತು ಗೊತ್ತಾ?
ಈ ಕುರಿತು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ, ನೇರ ನೇಮಕಾತಿ ಮತ್ತು ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೀಡಲಾಗುವ ಮುಂಬಡ್ತಿ ಪ್ರಕ್ರಿಯೆಗೆ ಇಲಾಖಾ ಮುಂಬಡ್ತಿ ಸಮಿತಿ ಸಭೆಯನ್ನು ಆಯೋಜಿಸದಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಸದರಿ ದಿನಾಂಕ: 18.11.2022ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
ಮೇಲ್ಕಂಡ ಸೂಚನೆಗಳು ಎಲ್ಲಾ ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು/ ಸಾರ್ವಜನಿಕ ಉದ್ಯಮ/ ಆಯೋಗ ನಿಗಮ ಮಂಡಳಿಗಳು ಮತ್ತು ಸರ್ಕಾರದಿಂದ ಅನುದಾನವಡೆಯುವ ಸಂಸ್ಥೆಗಳಿಗೂ ಸಹ ಅನ್ವಯಿಸುತ್ತದೆ.