ಬೆಂಗಳೂರು : ರಾಜ್ಯ ಸರ್ಕಾರವು ಚಾಮರಾಜನಗರ, ಹಾಸನ, ಕೊಡಗು, ಬೀದರ್ ಹಾವೇರಿ, ಕೊಪ್ಳ ಹಾಗೂ ಭಾಗಲಕೋಟೆ ಜಿಲ್ಲೆಗಳಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೆಲ ಷರತ್ತುಬದ್ಧ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕಳೆದ ವಿಧಾನಸಭೆ ಅಧಿವೇಶನದಲ್ಲಿ ಏಳು ಹೊಸ ವಿವಿಗಳ ಸ್ಥಾಪನೆ ಸಂಬಂಧ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ 2022 ಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ ಹೊಸ ವಿವಿಗಳ ರಚನೆಗೆ ಸೋಮವಾರ ಅಧಿಸೂಚನೆ ಹೊರಡಿಸಿದೆ. ಅಂದಿನಿಂದಲೇ ವಿವಿಗಳ ಕೇಂದ್ರ ಸ್ಥಳಗಳನ್ನು ಜಾರಿಗೆ ಬರಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.
ಮೂಲ ಮೈಸೂರು ವಿವಿಯಿಂದ ವಿಭಜಿಸಿರುವ ಚಾಮರಾಜನಗರ ವಿವಿಗೆ ಜಿಲ್ಲೆಯ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ಕೇಂದ್ರ ಸ್ಥಳವನ್ನಾಗಿ ಗುರುತಿಸಲಾಗಿದೆ. ಹಾಸನ ವಿವಿಗೆ ಜಿಲ್ಲೆಯ ಸ್ಥಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಮಂಡ್ಯ ವಿವಿಗೆ ಜಿಲ್ಲೆಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಗುಲ್ಬರ್ಗಾ ವಿವಿಯಿಂದ ವಿಭಜಸಲಾಗಿರುವ ಬೀದರ್ ವಿವಿಗೆ ಭಾಲ್ಕಿ ತಾಲೂಕಿನ ಹಾಲಹಳ್ಳಿಯ ಜ್ಞಾನ ಕಾರಂಜಿ, ಮಂಗಳೂರು ವಿವಿಯಿಂದ ವಿಭಜಿಸಿರುವ ಕೊಡಗು ವಿವಿಗೆ ಕುಶಾಲನಗರದ ಚಿಕ್ಕಲುವಾರ, ವಿಜಯನಗರ ಶ್ರೀಕೃಷ್ಣದೇವಾರಾಯ ವಿವಿಯಿಂದ ವಿಭಜಿಸಿರುವ ಕೊಪ್ಪಳ ವಿವಿಗೆ ತಳಕಲ್ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ರಾಣಿ ಚೆನ್ನಮ್ಮ ವಿವಿಗೆಯಿಂದ ವಿಭಜಿಸಿರುವ ಬಾಗಲಕೋಟೆ ವಿವಿಗೆ ಜಮಖಂಡಿ, ಕರ್ನಾಟಕ ವಿವಿಯಿಂದ ವಿಭಜಿಸಿರುವ ಹಾವೇರಿ ನೂತನ ವಿವಿಗೆ ಜಿಲ್ಲೆ ಕೆರೆಮತ್ತಿಹಳ್ಳಿಯನ್ನು ಕೇಂದ್ರ ಸ್ಥಳವನ್ನಾಗಿ ಗುರುತಿಸಲಾಗಿದೆ.