ಧಾರವಾಡ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ 2022-23ನೇ ಸಾಲಿನ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಡಿಸೆಂಬರ್ ಮಾಹೆಯ ಕೊನೆಯ ವಾರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಎಸ್.ಎಫ್ ಸಿದ್ದನಗೌಡರ ತಿಳಿಸಿದ್ದಾರೆ.
BREAKING NEWS : ಗುಜರಾತ್ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಬೀರಲಿದೆ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರು ಕಡ್ಡಾಯವಾಗಿ ಆನ್ಲೈನ್ http://bit.ly/ksgeadwdsports22 ಮೂಲಕವೇ ನೊಂದಣಿ ಆಗಬೇಕು. ನೋಂದಣಿ ಮಾಡಲು ಡಿಸೆಂಬರ್ 20 ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆನ್ಲೈನ್ ಲಿಂಕ್ ಭರ್ತಿ ಮಾಡುವ ಮುನ್ನ ಲಿಂಕ್ ನಲ್ಲಿಯ ಮಾಹಿತಿಗಳನ್ನು ಕಡ್ಡಾಯವಾಗಿ ಓದಬೇಕು. ಅಪ್ಲೋಡ್ ಮಾಡಲು ಬೇಕಾಗುವ ದಾಖಲಾತಿಗಳಾದ ಇತ್ತೀಚಿನ ಫೋಟೋ ಹಾಗೂ ಸೇವಾ ಪ್ರಮಾಣ ಪತ್ರ, ಇಲಾಖೆಯ ಗುರುತಿನ ಚೀಟಿಗಳನ್ನು ಮೊದಲೇ ಸೇವ್ (Save) ಮಾಡಿಟ್ಟುಕೊಳ್ಳಬೇಕು. ಕ್ರೀಡಾಕೂಟ ನಡೆಯುವ ದಿನದಂದು ಆಧಾರ್ ಕಾರ್ಡ್ ಸೇರಿದಂತೆ ಅಪಲೋಡ್ ಮಾಡಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು. ಕ್ರೀಡಾಕೂಟದಂದು ನೇರ ದಾಖಲಾತಿಗೆ ಅವಕಾಶವಿಲ್ಲ, ಕಡ್ಡಾಯವಾಗಿ ಆನಲೈನ್ ನೋಂದಣಿ ಮಾಡಿದವರಿಗೆ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಕ್ರೀಡಾಕೂಟದ ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆರ್.ಎನ್. ಶೆಟ್ಟಿ ಕ್ರೀಡಾಂಗಣ 0836-2447427 ಹಾಗೂ 8123985774, ಮಂಜುನಾಥ ಯಡಳ್ಳಿ 9448668221 ಹಾಗೂ ಕ್ರೀಡಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ 9739321506 ಇವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ಧನಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.