ಬಳ್ಳಾರಿ : ಮುಂದೊಂದು ದಿನ ಅವಕಾಶ ಬಂದ್ರೆ ಶ್ರೀರಾಮುಲು ಕೂಡ ಮುಖ್ಯಮಂತ್ರಿ ಆಗ್ತಾನೆ, ರಾಮುಲು ಎಸ್ ಟಿ ಸಮುದಾಯದ ಹೃದಯ ಸಾಮ್ರಾಟ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಬಿಜೆಪಿ ಎಸ್ ಟಿ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಅವರು ಶ್ರೀರಾಮುಲು ಬಗ್ಗೆ ಹಗುರವಾಗಿ ಮಾತಾಡಿದ್ರಿ. ರಾಮುಲು ಅನ್ನು ಪೆದ್ದ ಅಂದ್ರು, ರಾಮುಲು ಎಸ್ ಟಿ ಸಮುದಾಯದ ಹೃದಯ ಸಾಮ್ರಾಟ. ಮುಂದೊಂದು ದಿನ ಅವಕಾಶ ಬಂದ್ರೆ ಶ್ರೀರಾಮುಲು ಕೂಡ ಮುಖ್ಯಮಂತ್ರಿ ಆಗ್ತಾನೆ. ಸಾಮಾಜಿಕ ನ್ಯಾಯ ಕೊಡೋದು ಬಿಜೆಪಿ ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ವಿಸಲು ನನಗೆ ವಾಲ್ಮೀಕಿ, ಬುದ್ಧ, ಬಸವಣ್ಣ ಸ್ಫೂರ್ತಿ. ಕೇಂದ್ರದಲ್ಲಿ 3% ಇದ್ದ ಮೀಸಲಾತಿಯನ್ನ 7% ಮಾಡಿದ್ದು ಮೋದಿ ಅವರು. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಒಂದು ದೊಡ್ಡ ಸಮಾವೇಶ ಮಾಡಿ ಮುನ್ನುಡಿ ಬರೆದಿದ್ದೀರಿ. ಇದು ಪರಿವರ್ತಾನಾ ಸಮಾವೇಶ, ಬದಲಾವಣೆಯ ಸಮಾವೇಶ. ಎಸ್ಸಿ-ಎಸ್ಟಿ ಜನರ ಬದುಕು ಬದಲಾಗಬೇಕು, ಬಡವರ ಬದುಕು ಬದಲಾಗಬೇಕು ಎಂದು ಹೇಳಿದರು.