ಬೆಂಗಳೂರು : ಕನ್ನಡ ಮಾಧ್ಯಮ ಶಾಲೆಗಳನ್ನು ( Kannada Medium School ) ಉಳಿಸಿ, ಬೆಳೆಸಲು ಕನ್ನಡ ಮಾಧ್ಯಮದ ಜೊತೆಗೆ ಉದ್ದೇಶಿತ ‘ಸರ್ಕಾರಿ ಮಾದರಿ ಶಾಲೆ’ಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ‘ಸ್ಪೋಕನ್ ಇಂಗ್ಲೀಷ್’ ( Spoken English ) ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
BREAKING NEWS : ಮಲೆಯಾಳಂನ ಜನಪ್ರಿಯ ನಟನ ಜತೆ ʻನಿತ್ಯಾ ಮೆನನ್ʼ ಮದುವೆ ಫಿಕ್ಸ್ ..! ಇಲ್ಲಿದೆ ಓದಿ | Nithya Menen
ಪ್ರಸಕ್ತ ವರ್ಷದಿಂದಲೇ ರಾಜ್ಯದ ಶಾಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸಲು ತಯಾರಿ ಮಾಡಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂವಹನ ಹಾಗು ಶಿಕ್ಷಣ ಪಡೆಯುವ ಉದ್ದೇಶದಿಂದ ಪ್ರಸಕ್ತ ವರ್ಷದಿಂದಲೇ ಇಂಗ್ಲೀಷ್ ಸ್ಪೋಕನ್ ಕ್ಲಾಸ್ ಶುರು ಮಾಡಲು ಮುಂದಾಗಿದೆ. ಸರ್ಕಾರಿ ಶಾಲೆಗಳಲ್ಲಿರುವ ಇಂಗ್ಲೀಷ್ ಶಿಕ್ಷಕರಿಗೆ ಈ ಬಗ್ಗೆ ವಿಶೇಷ ತರಬೇತಿ ಹಾಗು ಕೌಶಲ್ಯ ಹೆಚ್ಚಿಸಲು ಸಿದ್ಧತೆ ಮಾಡಲಾಗುತ್ತಿದೆ.
Good News : ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸಿಹಿಸುದ್ದಿ : ಉದ್ಯೋಗಿನಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
ಖಾಸಗಿ ಶಾಲೆಗಳು ಮತ್ತು ಇಂಗ್ಲೀಷ್ ಮಾಧ್ಯಮ ಶಿಕ್ಷಣದ ವ್ಯಾಮೋಹ ಬಹಳಷ್ಟು ಜನರಲ್ಲಿದೆ. ಗುಣಮಟ್ಟ ಹೇಗಾದರೂ ಇರಲಿ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕು ಎನ್ನುವ ಆಸೆ ಪಾಲಕರಲ್ಲಿ ಇದೆ. ರಾಜ್ಯದಲ್ಲಿನ ಕೆಪಿಎಸ್ ಶಾಲೆಗಳಲ್ಲೂ ಕೂಡ ಇಂಗ್ಲೀಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪಾಲಕರು ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ, ಮಾದರಿ ಶಾಲೆಗಳಲ್ಲಿ ಇಂಗ್ಲೀಷ್ನ್ನು ಸ್ಪೋಕನ್ ಇಂಗ್ಲೀಷ್ ಆಗಿ ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.