ಬೆಂಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನುಷ್ಠಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಗೆ ರಾಜ್ಯ ಸರ್ಕಾರ ಹೊಸ ನಿಯಮ ರೂಪಿಸಲು ಸಜ್ಜಾಗಿದ್ದು, ಇನ್ಮುಂದೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗಳಿಗೆ ಪಿಯುಸಿ, ಎಸ್ ಎಸ್ ಎಲ್ ಸಿ ಕಡ್ಡಾಯಗೊಳಿಸುತ್ತಿದೆ.
ಮಕ್ಕಳ ಪ್ರಾಥಮಿಕ ಹಂತದ ಕಲಿಕೆಗೆ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರ್ಹತೆ ನಿಗದಿಪಡಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗಳಿಗೆ ಪಿಯುಸಿ, ಎಸ್ ಎಸ್ ಎಲ್ ಸಿ ಕಡ್ಡಾಯಗೊಳಿಸುತ್ತಿದೆ. ಜೊತೆಗೆ ಸರಕಾರದ ಅಂಗೀಕೃತ ಸಂಸ್ಥೆಗಳಲ್ಲಿ ಅಂಗನವಾಡಿ ಚಟುವಟಿಕೆಗೆ ಸಂಬಂಧಿಸಿದ ಇಸಿಸಿಇ ಡಿಪ್ಲೊಮಾ, ಜೆಒಸಿ, ಎನ್ಟಿಟಿ, ಡಿಪ್ಲೋಮಾ ಇನ್ ನ್ಯೂಟ್ರೀಷಿಯನ್, ಹೋಂ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್ ಸೇರಿದಂತೆ ಇನ್ನಿತರೆ ಶೈಕ್ಷಣಿಕ ತರಬೇತಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
ಹೊಸ ಕಾರ್ಯಕರ್ತೆಯರ ಆಯ್ಕೆ ವೇಳೆ ಅಂಗನವಾಡಿ ಚಟುವಟಿಕೆ ಸಂಬಂಧಿತ ಶೈಕ್ಷಣಿಕ ಕೋರ್ಸ್ ಪೂರೈಸಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ಕಾರ್ಯಕರ್ತೆಯರ ಹುದ್ದೆಗೆ ಎಸ್ ಎಸ್ ಎಲ್ ಸಿ, ಸಹಾಯಕಿಯರಿಗೆ 7ನೇ ತರಗತಿ ಮಾನದಂಡವಿತ್ತು.