ವಿಜಯಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಅಪರೂಪದ ಸಂತ, ನಡೆದಾಡುವ ದೇವರು, ಖ್ಯಾತ ಪ್ರವಚನಕಾರ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ನಿನ್ನೆ ಸಂಜೆ 6.05 ಕ್ಕೆ ಲಿಂಗೈಕ್ಯರಾಗಿದ್ದು, ಸಿದ್ದೇಶ್ವರ ಶ್ರೀಗಳ ಆಶಯದಂತೆ ಇಂದು ಸಂಜೆ ಜ್ಞಾನಯೋಗಾಶ್ರಮದ ಆವರಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶ್ರೀಗಳು ವೀಲ್ನಲ್ಲಿ ಬರೆದಿಟ್ಟಿರುವಂತೆ ಅಂತ್ಯಸಂಸ್ಕಾರ ಮಾಡಲಾಗುವುದು, ಶ್ರೀಗಳು ಈ ಶತಮಾನ ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ. ಸಿದ್ದೇಶ್ವರ ಶ್ರೀಗಳಿಂದಲೇ ವಿಜಯಪುರ ಜಿಲ್ಲೆಗೆ ಒಂದು ಉನ್ನತ ಸ್ಥಾನವಿತ್ತು ಅಂತಹ ಶ್ರೀಗಳು ಇನ್ನಿಲ್ಲ. ಶ್ರೀಗಳನ್ನು ಕಳೆದುಕೊಂಡ ವಿಜಯಪುರ ಜನ ಬಡವರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
BIGG NEWS : ಸಿದ್ದೇಶ್ವರ ಶ್ರೀಗಳು ರಾಷ್ಟ್ರೀಯ ಸಂತರು : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್