ಹುಬ್ಬಳ್ಳಿ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿಚಾರದಲ್ಲಿ ಯಾರು ಏನೇ ಒಪ್ಪಿಕೊಳ್ಳಲಿ, ನಾನು ತನಿಖೆ ಮಾಡಿಸುತ್ತಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಕ್ರಮ ತಡೆಯಲು ಹೊಸ ಪ್ಲ್ಯಾನ್: ಪರೀಕ್ಷಾ ಕೇಂದ್ರಗಳ ಸುತ್ತ ಇಂಟರ್ನೆಟ್ ಸ್ಥಗಿತಗಳಿಸಿದ ಸರ್ಕಾರ!… ಎಲ್ಲಿ ಗೊತ್ತಾ?
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಟ್ಟೆ ಎಸೆತ ವಿಚಾರದಲ್ಲಿ ಯಾರು ಏನೇ ಒಪ್ಪಿಕೊಳ್ಳಲಿ, ನಾನು ತನಿಖೆ ಮಾಡಿಸುತ್ತಿದ್ದೇನೆ. ನಾಳೆ ಇನ್ನೊಬ್ಬ ಮಾಡಿದ್ದು ಎಂದು ಕ್ಲೈಮ್ ಮಾಡಿಕೊಳ್ಳುತ್ತಾನೆ. ಹೀಗಾಗಿಯೇ ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮೊದಲು ಶಾಂತಿ ಮುಖ್ಯ, ಸಾವರ್ಕರ್ ಬಗ್ಗೆ ಇಂದಿರಾ ಗಾಮಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿಪ್ಪು-ಸಾವರ್ಕರ್ ಪರ ವಿರೋಧ ವಿಚಾರಗಳಿವೆ. ಅಲ್ಲದೇ ವೈಚಾರಿಕ ಭಿನ್ನಾಭಿಪ್ರಾಯಗಳೂ ಇವೆ. ಅದನ್ನು ರಾಜಕರಣ ಮಾಡುವುದು ಆಯಾ ಪಕ್ಷಕ್ಕೆ ಬಿಟ್ಟದ್ದು ಎಂದು ಹೇಳಿದ್ದಾರೆ.
BIGG NEWS : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ : ಸಂಪತ್ ಹೇಳಿಕೆ ಷಡ್ಯಂತ್ರದಿಂದ ಕೂಡಿದೆ : ಈಶ್ವರ್ ಖಂಡ್ರೆ
ಪ್ರಚೋದನಾಕಾರಿ ಹೇಳಿಕೆ ಬೇಡ, ವೈಚಾರಿಕ ಹಿನ್ನೆಲೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಿ ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಇದು ಒಂದು ಕಡೆ ನಡೆಯುತ್ತಿಲ್ಲ. ಎರಡೂ ಕಡೆಯೂ ನಡೆಯುತ್ತಿದೆ. ಯಾರೂ ಸಹ ಇನ್ನೊಬ್ಬರ ಮನ ನೋಯಿಸುವ ಪ್ರಚೋದನಾಕಾರಿ ಹೇಳಿಕೆ ನೀಡಬಾರದು. ಒಂದೊಮ್ಮೆ ಕಾನೂನು ಉಲ್ಲಂಘಿಸುವುದು ಸರಿಯಲ್ಲ ಎಂದರು.