ಕೋಲಾರ : ಕಾಂಗ್ರೆಸ್ ಪಕ್ಷದ ಕೊಡಗು ಚಲೋ ವಿಚಾರದಲ್ಲಿ ನನಗೆ ಯಾವ ಭಯವೂ ಇಲ್ಲ , ಜನರ ಶಾಂತಿ ನೆಮ್ಮದಿ ಮುಖ್ಯ, ಹಾಗಾಗಿ ಸೆಕ್ಸನ್ 144 ಜಾರಿಗೊಳಿಸಿದ್ದೇವೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಜನರ ಶಾಂತಿ, ನೆಮ್ಮದಿ ಮುಖ್ಯ. ಹಾಗಾಗಿ ಸೆಕ್ಷನ್ 144 ಜಾರಿಗೊಳಿಸಿದ್ದೇವೆ. ಎರಡು ಪಕ್ಷಗಳ ಜಗಳದಿಂದಾಗಿ ಕೊಡಗಿನ ಶಾಂತಿ ಕದಡಬಾರದು. ಕೊಡಗು ಚಲೋ ಮಾಡಲು ಆಗುವುದಿಲ್ಲ. ಯಾವ ಪಕ್ಷಕ್ಕೂ ಅಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಗಣೇಶನ ಹಬ್ಬ ಶಾಂತಿಯುತವಾಗಿ ನಡೆಯಬೇಕು. ಸೂಕ್ಷ್ಮ ಪ್ರದೇಶಗಳಲ್ಲೂ ಗಣೇಶನ ಹಬ್ಬ ಮಾಡಲು ನಿರ್ಧಾರ ಮಾಡಿದ್ದೇವೆ. ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು. ನಾವು ಅಲ್ಲಿ ಭದ್ರತೆ ಕೊಡುತ್ತೇವೆ ಎಂದು ಹೇಳಿದ್ದಾರೆ.
BIGG NEWS : `SC-ST’ ಸಮುದಾಯಕ್ಕೆ ಸಿಹಿಸುದ್ದಿ : ಸಾಲ ಸೌಲಭ್ಯ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ