ಹುಬ್ಬಳ್ಳಿ : ಎಸ್ ಸಿ-ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
BIGG NEWS : ಕಲಿಯುಗದಲ್ಲಿ ನಮ್ಮ ಸಮಾಜದ ಹಿಂದೆ ಶ್ರೀರಾಮನಂತೆ ಸಿಎಂ ಬೊಮ್ಮಾಯಿ ನಿಂತಿದ್ದಾರೆ : ಸಚಿವ ಶ್ರೀರಾಮುಲು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್ ಗಳೆಂದು ತಿಳಿದುಕೊಂಡಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ಹಿಂದುಳಿದವರ ಕಲ್ಯಾಣ ಮಾಡಲಿಲ್ಲ. ಅದೇ ಕಾರಣಕ್ಕೆ ಇಂದಿಗೂ ದಲಿತರ ಸ್ಥಿತಿ ಹೀನಾಯವಾಗಿದೆ. ಈ ಸಂಬಂಧ ಮೀಸಲಾತಿ ಹೆಚ್ಚಳ ಮಾಡಿ ಕೊಡುಗೆ ನೀಡಲಾಗಿದೆ. ಬೊಮ್ಮಾಯಿ, ಸಚಿವರು, ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಂಚಮಸಾಲಿ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ಮಾಡ್ತೀವೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.