ನವದೆಹಲಿ : ಇರಾಕ್ ಮತ್ತು ಸೌದಿ ಅರೇಬಿಯಾವನ್ನ ಹಿಂದಿಕ್ಕಿ ರಷ್ಯಾ ಭಾರತದ ಉನ್ನತ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಅಂದರೆ, ಈಗ ಭಾರತವು ರಷ್ಯಾದಿಂದ ಹೆಚ್ಚು ತೈಲವನ್ನ ಖರೀದಿಸಲು ಪ್ರಾರಂಭಿಸಿದೆ. ಅಕ್ಟೋಬರ್ ವರದಿಯ ಪ್ರಕಾರ, ಭಾರತಕ್ಕೆ ತೈಲವನ್ನ ಮಾರಾಟ ಮಾಡುವ ಕ್ಷೇತ್ರದಲ್ಲಿ ರಷ್ಯಾವು ಇರಾಕ್ ಮತ್ತು ಸೌದಿ ಅರೇಬಿಯಾವನ್ನ ಹಿಂದಿಕ್ಕಿದೆ. ಸೌದಿ ಅರೇಬಿಯಾ ಕೆಲವು ತಿಂಗಳ ಹಿಂದೆ ರಷ್ಯಾದ ಹಿಂದೆ ಹೋಗಿದ್ದರೂ, ಈಗ ರಷ್ಯಾವು ಇರಾಕ್’ನ್ನ ಸಹ ಹಿಂದಿಕ್ಕಿದೆ. ಅಂದರೆ, ಹಲವು ದಶಕಗಳಿಂದ ನಡೆಯುತ್ತಿರುವ ಭಾರತ ಮತ್ತು ರಷ್ಯಾ ನಡುವಿನ ಸ್ನೇಹವು ಅತಿದೊಡ್ಡ ವ್ಯಾಪಾರ ಪಾಲುದಾರಿಕೆಯಾಗಿ ಬದಲಾಗುತ್ತಿದೆ.
ರಷ್ಯಾ ಅತಿ ದೊಡ್ಡ ತೈಲ ಪೂರೈಕೆದಾರ ರಾಷ್ಟ್ರ
ಭಾರತದ ಪರಂಪರಾಗತ ತೈಲ ಮಾರಾಟಗಾರರಾದ ಇರಾಕ್ ಮತ್ತು ಸೌದಿ ಅರೇಬಿಯಾವನ್ನ ಹಿಂದಿಕ್ಕಿದೆ. ಈ ಮೂಲಕ ರಷ್ಯಾವು ಅಕ್ಟೋಬರ್ನಲ್ಲಿ ಭಾರತದ ಅಗ್ರ ತೈಲ ಪೂರೈಕೆದಾರ ರಾಷ್ಟ್ರವಾಗಿದೆ ಎಂದು ಇಂಧನ ವ್ಯಾಪಾರವನ್ನು ಪತ್ತೆಹಚ್ಚುವ ಸಂಸ್ಥೆಯಾದ ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸ್ನ ದತ್ತಾಂಶಗಳು ತಿಳಿಸಿವೆ. ಈ ವರ್ಷದ ಮಾರ್ಚ್ 31 ರವರೆಗೆ ಭಾರತಕ್ಕೆ ತನ್ನ ಒಟ್ಟು ಪೂರೈಕೆಯಲ್ಲಿ ಕೇವಲ 0.2 ಪ್ರತಿಶತವನ್ನು ಮಾತ್ರ ಆಮದು ಮಾಡಿಕೊಳ್ಳುತ್ತಿದ್ದ ರಷ್ಯಾ, ಕೇವಲ ಎಂಟು ತಿಂಗಳಲ್ಲಿ ಭಾರತದ ಅಗ್ರ ತೈಲ ಮಾರಾಟಗಾರರಾಗಿ ಹೊರಹೊಮ್ಮಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಅಕ್ಟೋಬರ್ನಲ್ಲಿ ರಷ್ಯಾವು ಭಾರತಕ್ಕೆ ದಿನಕ್ಕೆ 935,556 ಬ್ಯಾರೆಲ್ ಕಚ್ಚಾ ತೈಲವನ್ನು (ಬಿಪಿಡಿ) ಪೂರೈಸಿದೆ. ವರದಿಯ ಪ್ರಕಾರ, ಭಾರತವು ಈಗ ರಷ್ಯಾದಿಂದ ತನ್ನ ಒಟ್ಟು ತೈಲ ಆಮದಿನ 22 ಪ್ರತಿಶತವನ್ನು ಖರೀದಿಸುತ್ತಿದೆ. ಆದ್ರೆ, ಸೆಪ್ಟೆಂಬರ್’ವರೆಗೆ ಭಾರತಕ್ಕೆ ಹೆಚ್ಚು ತೈಲವನ್ನ ಮಾರಾಟ ಮಾಡುತ್ತಿದ್ದ ಇರಾಕ್, ತನ್ನ ಒಟ್ಟು ತೈಲ ಅಗತ್ಯದ 20.5 ಪ್ರತಿಶತವನ್ನು ಖರೀದಿಸಿದೆ ಮತ್ತು ಭಾರತವು ಸೌದಿ ಅರೇಬಿಯಾದಿಂದ 16 ಪ್ರತಿಶತದಷ್ಟು ತೈಲವನ್ನು ಖರೀದಿಸಿದೆ.
ಬ್ರಾಂಡ್ ಬೆಂಗಳೂರಿಗೆ ಮಸಿ ಬಳಿದಿದ್ದೇ ನಿಮ್ಮ ಸಾಧನೆಯೇ..? : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Viral News : ಯುಪಿ ರಸ್ತೆಯಲ್ಲೇ ಮಹಿಳೆಯರಿಗೆ ಹಿಗ್ಗಾಮುಗ್ಗ ಲಾಠಿ ಏಟು ಬೀಸಿದ ಪೊಲೀಸ್, ಶಾಕಿಂಗ್ Video| Watch