ಶಿವಮೊಗ್ಗ : ಕಳೆದ ವಾರ ಶಿವಮೊಗ್ಗ ನಗರದಲ್ಲಿ ರೌಡಿಶೀಟರ್ ಹಂದಿ ಅಣ್ಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ಕಳೆದ ವಾರ ನಟೋರಿಯಸ್ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಹತ್ಯೆ ಮಾಡಿದ ಆರೋಪಿಗಳು ಚಿಕ್ಕಮಗಳೂರು ಎಸ್ ಪಿ ಅಕ್ಷಯ್ ಮುಂದೆ ಶರಣಾಗಿದ್ದಾರೆ.
ಕಳೆದ ವಾರ ಶಿವಮೊಗ್ಗ ನಗರದಲ್ಲಿ ಇನೋವಾ ಕಾರಿನಲ್ಲಿ ಬಂದ ಆರೋಪಿಗಳು ಹಂದಿ ಅಣ್ಣಿಯನ್ನು ಲಾಂಗಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಹಂದಿ ಅಣ್ಣಿ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದ.