ಹಾಸನ : ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪುಸ್ತಕ ಪರಿಷ್ಕರಣೆಗೆ ಮತ್ತೆ ವಿರೋಧ ವ್ಯಕ್ತವಾಗಿದ್ದು, ಪಠ್ಯದಲ್ಲಿ ತಮ್ಮ ಕವಿತೆಯನ್ನು ಬೋಧಿಸಲು ಒಪ್ಪಿಗೆ ಇಲ್ಲ ಎಂದು ಸಾಹಿತಿ ರೂಪಾ ಹಾಸನ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
Big news: ಉದ್ಯೋಗ ಪಡೆಯಲು 10 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ತರಬೇತಿ: ಸಚಿವ ಅಶ್ವಥ್ ನಾರಾಯಣ್
`ಅಮ್ಮನಾಗುವುದೆಂದರೆ’ ಕವಿತೆ ಬೋಧನೆಗೆ ಅನುಮತಿ ನೀಡುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸಾಹಿತಿ ಸಾಹಿತಿ ರೂಪ ಹಾಸನಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಇದಕ್ಕೆ ರೂಪಾ ಹಾಸನ ಅವರು ತಮ್ಮ ಕವಿತೆಯನ್ನು ಬಳಸದಂತೆ ಮತ್ತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವ ಮೂಲಕ ಅಧಿಕಾರಿಗಳ ಮನವಿಯನ್ನು ಸ್ಪಷ್ಟವಾಗಿ ತಿರಸ್ಕಾರ ಮಾಡಿದ್ದಾರೆ.
2022-23 ನೇ ಸಾಲಿನ ಪಠ್ಯ ಪುಸ್ತಕಗಳ ಪುನರ್ ಪರಿಶೀಲನಾ ಸಮಿತಿಯು, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಮನಬಂದಂತೆ ಹಲವು ತಿದ್ದುಪಡಿ, ಗೊಂದಲಪೂರಿತ ಮಾರ್ಪಾಡುಗಳನ್ನು ಮಾಡಿದೆ. ಇದರಿಂದ ಮಕ್ಕಳಿಗೆ ಬಹುತ್ವ ಭಾರತದ ಬಹುಸಂಸ್ಕೃತಿಗಳ ಬಹು ಆಯಾಮಗಳನ್ನು ಒಳಗೊಳ್ಳುವ ರೀತಿಯಲ್ಲಿ ಪಠ್ಯಗಳಿಲ್ಲದಂತಿರುವುದು ಖೇದನೀಯ ಎಂದಿದ್ದಾರೆ.
BIG NEWS: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸ್ವಾಮೀಜಿ ವಿರುದ್ದ ಪೋಕ್ಸೋ ಪ್ರಕರಣ ದಾಖಲು, ಬಂಧನದ ಭೀತಿ