ಕೆಎನ್ಎನ್ಡಿಜಿಟಲ್ ಡೆಸ್ಕ್ : ಬ್ರಿಟಿಷ್ ಪ್ರಧಾನಿಯಾದ ನಂತ್ರ ರಿಷಿ ಸುನಕ್ ಮೊದಲ ಬಾರಿಗೆ ಯು-ಟರ್ನ್ ಹೊಡೆದಿದ್ದು, ಮೊದಲು ಭಾಗಿಸುವುದಿಲ್ಲ ಎಂದಿದ್ದ ಹವಾಮಾನ ಸಮ್ಮೇಳನದಲ್ಲಿ ಈಗ ಭಾಗವಹಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ವಾರ ಈಜಿಪ್ಟ್ನಲ್ಲಿ ನಡೆಯಲಿರುವ COP27 ಶೃಂಗಸಭೆಯಲ್ಲಿ ಬ್ರಿಟಿಷ್ ಪ್ರಧಾನಿ ಭಾಗವಹಿಸಲಿದ್ದಾರೆ.
“ಹವಾಮಾನ ಬದಲಾವಣೆಯ ಮೇಲೆ ಕ್ರಮ ಕೈಗೊಳ್ಳದೇ ಯಾವುದೇ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ. ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡದೆ ಇಂಧನ ಭದ್ರತೆ ಸಾಧ್ಯವಿಲ್ಲ” ಎಂದು ಸುನಕ್ ಟ್ವಿಟರ್ನಲ್ಲಿ ಬರೆದಿದ್ದಾರೆ. “ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯವನ್ನ ನಿರ್ಮಿಸುವ ಗ್ಲ್ಯಾಸ್ಗೋ ಪರಂಪರೆಯನ್ನ ಮುಂದಕ್ಕೆ ಕೊಂಡೊಯ್ಯಲು” ತಾನು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.
ಕಳೆದ ವರ್ಷ COP26 ಕ್ಲೈಮೇಟ್ ಕಾನ್ಫರೆನ್ಸ್ (ಪಕ್ಷಗಳ ಸಮ್ಮೇಳನದ 26 ನೇ ವಾರ್ಷಿಕ ಸಮ್ಮೇಳನ) ಯುಕೆ ಗ್ಲಾಸ್ಗೋದಲ್ಲಿ ನಡೆಯಿತು. ಈ ಅವಧಿಯಲ್ಲಿ ಹಲವು ಭರವಸೆಗಳನ್ನ ನೀಡಲಾಯಿತು. 2050ರ ವೇಳೆಗೆ ಕಲ್ಲಿದ್ದಲು ಬಳಕೆಯನ್ನ ನಿಲ್ಲಿಸುವುದಾಗಿ ವಿಶ್ವದ 40ಕ್ಕೂ ಹೆಚ್ಚು ದೇಶಗಳು ಭರವಸೆ ನೀಡಿವೆ. ಜಾಗತಿಕ ತಾಪಮಾನದ ಕೆಟ್ಟ ಪರಿಣಾಮಗಳನ್ನ ತಪ್ಪಿಸಲು ಜಗತ್ತಿಗೆ ಇನ್ನೂ ಅವಕಾಶವಿದೆ ಎಂದು ಇಲ್ಲಿ ಹೇಳಲಾಗಿದೆ. ಈ ಭರವಸೆಗಳೊಂದಿಗೆ ಮುಂದುವರಿಯಲು ಸಿದ್ಧ ಎಂದು ಸುನಕ್ ಹೇಳುತ್ತಾರೆ. ನವೆಂಬರ್ 6 ರಿಂದ 18 ರವರೆಗೆ ಈಜಿಪ್ಟ್ನ ಶರ್ಮ್ ಎಲ್-ಶೇಖ್ನಲ್ಲಿ ಹವಾಮಾನ ಶೃಂಗಸಭೆ (COP27) ನಡೆಯಲಿದೆ.
BIGG NEWS ; ಈ ‘ಪೋರ್ಟಲ್’ನಲ್ಲಿ ನಿಮ್ಮ ದೂರಿನ ಸ್ಥಿತಿ ಪರಿಶೀಲಿಸಿ, ನಾಳೆ ‘ಪ್ರಧಾನಿ ಮೋದಿ’ ಚಾಲನೆ
BIGG NEWS : ಮಾಜಿ ಸಂಸದ ‘ಮುದ್ದ ಹನುಮೇಗೌಡ ‘ನಾಳೆ ಅಧಿಕೃತವಾಗಿ ‘ಬಿಜೆಪಿ’ ಸೇರ್ಪಡೆ
BIGG NEWS ; ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ; ವಿಶ್ವದ ಅತಿದೊಡ್ಡ ‘ಐಫೋನ್ ಫ್ಯಾಕ್ಟರಿ’ ಪ್ರದೇಶ ಲಾಕ್ ಡೌನ್