ಗದಗ : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಆಪ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
BIG NEWS : ‘ದೆಹಲಿ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ’: ಕಾರಿಗೆ ಸಿಲುಕಿ ಮೃತಪಟ್ಟ ಯುವತಿ ಕುಟುಂಬ ಹೇಳಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿ ಅವರು ಒಪ್ಪಿಗೆ ಕೊಟ್ಟರೆ ಎಲ್ಲ ರೀತಿಯ ಚಿಕಿತ್ಸೆಗೂ ಸಿದ್ದತೆ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರದಿಂದ ಸ್ವಾಮೀಜಿಗಳಿಗೆ ಚಿಕಿತ್ಸೆಕೊಡಲು ಸಿದ್ದ ಎಂದು ತಿಳಿಸಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿಗಳಿಗೆ ಎಲ್ಲಿ ಬೇಕಾದ್ರೂ ಚಿಕಿತ್ಸೆ ಕೊಡಿಸಲು ತಯಾರಿದ್ದೇವೆ. ಸ್ವಾಮೀಜಿ ಮಹಾವಿಭೂತಿ ಪುರುಷರು ಪುಣ್ಯದ ಜೀವ, ಸ್ಥಳೀಯವಾಗಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.