ಮಡಿಕೇರಿ : ಪ್ರಸಕ್ತ(2022-23) ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ನಾನಾ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
BIGG NEWS : ದಾವಣಗೆರೆಯಲ್ಲಿ ಕಾರು-ಬೈಕ್ ನಡುವೆ ಭೀಕರ ಅಪಘಾತ : ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರ ಸಾವು
ಹಸಿರು ಮನೆಯಲ್ಲಿ ಶಿಥಿಲಗೊಂಡಿರುವ /ಹಾಳಾಗಿರುವ ಪಾಲಿಥೀನ್ ಶೀಟ್ಗಳ ಬದಲಾವಣೆಗೆ ಸಹಾಯಧನ (ಅಸಿಸ್ಟೆಂಟ್ಸ್ ಫಾರ್ ರೀ ಪ್ಲೇಸ್ಮೆಂಟ್ ವಿತ್ ನ್ಯೂ ಪಾಲಿಥೀನ್ ಶೀಟ್) ಹಸಿರು ಮನೆಯಲ್ಲಿ ಬೇಸಾಯ ಮಾಡಿರುವ ಗುಲಾಬಿ, ಕಾರ್ನೆಷಿನ್, ಜರ್ಬೆರಾ, ಸೇವಂತಿಗೆ, ಆರ್ಕಿಡ್, ಆಂಥೋರಿಯಂ, ಟೊಮ್ಯಟೋ, ಕ್ಯಾಪ್ಸಿಕಂ, ಬದನೆ, ಸೌತೆಕಾಯಿ (ಇಂಗ್ಲೀಷ್ ಕುಕುಂಬರ್) ಬೆಳೆಗಳನ್ನು ಮಾತ್ರ ಸಹಾಯಧನಕ್ಕೆ ಪರಿಗಣಿಸಲಾಗುವುದು.
ಘಟಕ ವೆಚ್ಚ ರೂ: 60 ರಂತೆ ಗರಿಷ್ಟ 1 ಹೆಕ್ಟೇರ್ (10,000 ಚಮೀಗೆ) ರೂ. 6 ಲಕ್ಷಗಳಿಗೆ ಶೇ.25 ರಂತೆ ಪ್ರತಿ ಚದರ ಮೀಟರಗೆ ರೂ.15 ರಂತೆ ಗರಿಷ್ಟ 1 ಹೆಕ್ಟೇರ್ (10,000 ಚಮೀಗೆ) ರೂ.1.50 ಲಕ್ಷಗಳಿಗೆ ಮೀರದಂತೆ ಸಹಾಯಧನ ನೀಡಲಾಗುವುದು.
ಹಸಿರು ಮತ್ತು ಅನುತ್ಪಾದಕ ಗಿಡಗಳನ್ನು ತೆಗೆಯುವುದು ಮತ್ತು ಹೊಸ ಗಿಡಗಳನ್ನು ನೆಡಲು ಸಹಾಯಧನ (ಅಸಿಸ್ಟೆಂಟ್ ಫಾರ್ ರೀ ಪ್ಲೇಸ್ಮೆಂಟ್ ಇನ್ ಗ್ರೀನ್ ಹೌಸ್) ಹಸಿರು ಮನೆಯಲ್ಲಿ ಬೇಸಾಯ ಮಾಡಿರುವ ಗುಲಾಬಿ, ಕಾರ್ನೆಷಿನ್, ಜರ್ಬೆರಾ, ಸೇವಂತಿಗೆ, ಆರ್ಕಿಡ್, ಆಂಥೋರಿಯಂ, ಟೊಮ್ಯಟೋ, ಕ್ಯಾಪ್ಸಿಕಂ, ಬದನೆ, ಸೌತೆಕಾಯಿ, ಬೆಳೆಗಳನ್ನು ಮಾತ್ರ ಸಹಾಯಧನಕ್ಕೆ ಪರಿಗಣಿಸುವುದು.
ಹೂವಿನ ಬೆಳೆಗಳಿಗೆ ಘಟಕ ವೆಚ್ಚ ಪ್ರತಿ ಚ.ಮೀಗೆ ರೂ. 50 ರಂತೆ, ಗರಿಷ್ಟ, 1.00 ಹೆಕ್ಟೇರಿಗೆ (10000 ಚಮೀ) ರೂ. 5 ಲಕ್ಷಗಳಿಗೆ ಶೇ.25 ರಂತೆ ಪ್ರತಿ ಚ.ಮೀಗೆ ರೂ. 12 ರಂತೆ ಗರಿಷ್ಟ 1 ಹೆಕ್ಟೇರ್ಗೆ ರೂ. 1.25 ಲಕ್ಷಗಳಿಗೆ ಸಹಾಯಧನ ಮೀರದಂತೆ ಹಾಗೂ ತರಕಾರಿ ಬೆಳೆಗಳಿಗೆ ಘಟಕ ವೆಚ್ಚ ಪ್ರತಿ ಚ.ಮೀ.ಗೆ ರೂ.25 ರಂತೆ ಗರಿಷ್ಟ 1 ಹೆಕ್ಟರ್ಗೆ, ರೂ 2.50 ಲಕ್ಷಗಳಿಗೆ ಶೇ.25 ರಂತೆ ಪ್ರತಿ ಚಮೀ.ಗೆ ರೂ.6.25 ರಂತೆ ಗರಿಷ್ಟ 1.00 ಹೆಕ್ಟೇರಗೆ ರೂ: 0.625 ಲಕ್ಷ ಸಹಾಯಧನ ಮೀರದಂತೆ ಸಹಾಯಧನ ನೀಡಲಾಗುವುದು.
ಸೋಲಾರ್ ಪಂಪ್ ಖರೀದಿ, ನೀರಿನಲ್ಲಿ ಕರಗುವ ರಸ ಗೊಬ್ಬರಗಳ ಖರೀದಿ, ಲಘು ಪೆÇೀಷಕಾಂಶಗಳ ಮಿಶ್ರಣ ಖರೀದಿಗೆ ಸಹಾಯಧನ ಪಡೆಯಲು ರೈತರು ಆಯಾಯ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ಮಡಿಕೇರಿ, ಸೋಮವಾರಪೇಟೆ, ಪೆÇನ್ನಂಪೇಟೆ ಕಚೇರಿಗಳಲ್ಲಿ ಡಿಸೆಂಬರ್, 15 ರೊಳಗೆ ಅರ್ಜಿಯೊಂದಿಗೆ ನೋಂದಾಯಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಅವರು ತಿಳಿಸಿದ್ದಾರೆ.