ನವದೆಹಲಿ: ಪಕ್ಷ ನನ್ನಿಂದ ಏನು ಕೇಳುತ್ತದೆಯೋ ಅದನ್ನು ಮಾಡುತ್ತೇನೆ ಅಂತ ರಾಹುಲ್ ಗಾಂಧಿ ಹೇಳಿದ್ದು, ಈ ಮೂಲಕ ಅವರು ಅಮೇಥಿ ಲೋಕಸಭೆಯಿಂದ ಅವರು ಸ್ಪರ್ಧೆ ಮಾಡುವ ಸುಳಿವು ಬಿಟ್ಟುಕೊಂಡಿದ್ದಾರೆ. ಈಗಾಗಲೇ ರಾಹುಲ್ ಗಾಂಧಿಯವರು ವಯನಾಡಿನಿಂಧ ಲೋಕಸಭೆಗೆ ಎರಡನೇ ಬಾರಿ ಆಯ್ಕೆಯಾಗುವ ಸಲುವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಸಿಇಸಿ ಮತ್ತು ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಏನು ಮಾಡಲು ಕೇಳುತ್ತಾರೋ ಅದನ್ನು ನಾನು ಮಾಡುತ್ತೇನೆ… ಅಂತಹ ನಿರ್ಧಾರಗಳನ್ನು ನಮ್ಮ ಸಿಇಸಿಯಲ್ಲಿ ತೆಗೆದುಕೊಳ್ಳಲಾಗುತ್ತದೆ ಅಂತ ಹೇಳಿದ್ದರು. ರಾಹುಲ್ ಗಾಂಧಿ 2004 ರಿಂದ ಸತತ ಮೂರು ಬಾರಿ ಅಮೇಥಿ ಸ್ಥಾನವನ್ನು ಗೆದ್ದಿದ್ದರು . ಆದಾಗ್ಯೂ, ಕೇಂದ್ರ ಸಚಿವೆ ಇರಾನಿ 2019 ರಲ್ಲಿ 55,000 ಮತಗಳಿಂದ ಈ ಸ್ಥಾನವನ್ನು ಗೆಲುವ ಕಂಡರು.