ನವದೆಹಲಿ : ರಾಹುಲ್ ಗಾಂಧಿ ಅವರ ಕಾಂಗ್ರೆಸ್ʼನ “ಭಾರತ್ ಜೋಡೋ ಯಾತ್ರೆ” ಪ್ರತಿ ಭಾಗದಿಂದ ಟೀಕೆಗೆ ಒಳಗಾಗುತ್ತಿದೆ. ಶುಕ್ರವಾರ, ಬಿಜೆಪಿ ಸದಸ್ಯರು, ರಾಹುಲ್ ಗಾಂಧಿ ಪ್ರಚಾರದಲ್ಲಿ ಭಾಗವಹಿಸುವಾಗ ₹41,000 ಬರ್ಬೆರಿ ಟಿ-ಶರ್ಟ್ ಧರಿಸಿದ್ದರು ಎಂದು ಅಣಕಿಸಿದರು. ಈಗ ಅವ್ರ ತಮ್ಮ ʼಶೂʼಗಳಿಗಾಗಿ ಟ್ರೋಲ್ ಆಗುತ್ತಿದ್ದಾರೆ. ಅದರ ಬೆಲೆ ಮತ್ತು ಬ್ರಾಂಡ್ ಬಗ್ಗೆ ಅನೇಕರು ಅಪಹಾಸ್ಯ ಮಾಡುತ್ತಿದ್ದಾರೆ.
‘ಭಾರತ್ ಜೋಡೋ ಯಾತ್ರೆ’ಯಲ್ಲಿ ಹಣದುಬ್ಬರದ ವಿಷಯವನ್ನ ಎತ್ತುತ್ತಿರುವ ರಾಹುಲ್ ಗಾಂಧಿ ಅವರು ಸ್ವತಃ ₹41,257 ಮೌಲ್ಯದ ಟಿ-ಶರ್ಟ್ ಧರಿಸಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ ಮಿಷನ್ ಮುನ್ನಡೆಸುತ್ತಿರುವಾಗ ಅದು ಸಹ ವಿದೇಶಿ ಬ್ರಾಂಡ್ನದ್ದಾಗಿದೆ ಎಂದು ಬಿಜೆಪಿ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತು. ಇನ್ನು “ಭಾರತವು ಒಂದು ರಾಷ್ಟ್ರವಲ್ಲ ಎಂದು ಹೇಳಿದವರು ಈಗ ವಿದೇಶಿ ಟಿ-ಶರ್ಟ್ ಧರಿಸಿ ಭಾರತವನ್ನ ಒಗ್ಗೂಡಿಸುವ ಯಾತ್ರೆಯಲ್ಲಿದ್ದಾರೆ” ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದರು.
ಬರ್ಬೆರ್ರಿಯ ಅಧಿಕೃತ ವೆಬ್ಸೈಟ್ ಪರಿಶೀಲಿಸಿದಾಗ, ಅದರ ಇಂಡಿಯಾ ಸೈಟ್ ಬೆಲೆಯನ್ನ ತೋರಿಸುವುದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ, ಯಾಕಂದ್ರೆ, ಅದು “ಭಾರತಕ್ಕೆ ಸಾಗಿಸುವುದಿಲ್ಲ”. ಯುಎಸ್ ವೆಬ್ಸೈಟ್ ಸದರಿ ಟಿ-ಶರ್ಟ್ನ ಬೆಲೆ 480 ಡಾಲರ್ ಎಂದು ತೋರಿಸುತ್ತದೆ, ಇದು ಪ್ರಸ್ತುತ ದರದಲ್ಲಿ ಸುಮಾರು ₹38,000 ಆಗಿದೆ.
ಇದಾದ ನಂತರ, ಶನಿವಾರ, ಗಾಂಧಿ ಧರಿಸಿದ್ದ ನೀಲಿ ಜೋಡಿ ಸ್ನೀಕರ್ʼಗಳ ಬಗ್ಗೆ ಅನೇಕರು ಪ್ರಶ್ನಿಸಿದರು.
ನಾನು ರಾಹುಲ್ ಗಾಂಧಿ ಅವ್ರು ಶೂ ತುಂಬಾ ಇಷ್ಟಪಡುತ್ತೇನೆ ಮತ್ತು ನಾನು ಇದನ್ನು ಖರೀದಿಸಲು ಯೋಜಿಸುತ್ತಿದ್ದೇನೆ .. ಇದರ ಬ್ರಾಂಡ್ ಮತ್ತು ಬೆಲೆಯನ್ನ ಕಂಡುಹಿಡಿಯಲು ದಯವಿಟ್ಟು ನಿಮ್ಮ ಐಟಿ ಸೆಲ್ʼನ್ನ ನೀವು ಕೇಳಬಹುದೇ? ಎಂದು ಟ್ವಿಟರ್ ಬಳಕೆದಾರರೊಬ್ಬರು ಕೇಳಿದ್ದಾರೆ.
Hey @amitmalviya I like @RahulGandhi 's shoe very much and I am planning to buy this.. Could you pls ask your IT cell to find the brand and price of this? You guys are an expert in finding "Shoes" na 😅 Thanks in advance 😇#BharatJodoYatra #RahulGandhi #VanakkamRahul pic.twitter.com/bYnmb2yMzt
— Vijay (@vijay_writes) September 10, 2022
ಇನ್ನೊಬ್ಬರ ಬಳಕೆದಾರ, “ರಾಹುಲ್ ಗಾಂಧಿ ನನ್ಗೂ ಈ ಶೂ ಬೇಕು, ದಯವಿಟ್ಟು ಈ ಶೂ ಮಾದರಿ ಸಂಖ್ಯೆಯನ್ನ ನನಗೆ ತಿಳಿಸಿ” ಎಂದಿದ್ದಾರೆ.
@RahulGandhi please tell me the model number of this shoe which i want to get😊 pic.twitter.com/N1inQhFKXI
— Zahid Akhtar Babloo (@ZahidAk73911918) September 10, 2022