ಬೆಂಗಳೂರು : ದೇಶಾದ್ಯಂತ ಭಾರತ್ ಜೋಡೊ ಯಾತ್ರೆ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಈ ಹಿಂದೆ ಅಗಸ್ಟ್ 2ರಂದು ಯಾತ್ರೆ ನಡೆಸಲು ನಿರ್ಧರಿಸಿತ್ತು. ಆದ್ರೆ, ಈಗ ಅಕ್ಟೋಬರ್ಗೂ ಮುನ್ನವೇ ಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ 6 ತಿಂಗಳುಗಳ ಕಾಲ ಜೋಡೋ ಯಾತ್ರೆ ನಡೆಯಲಿದ್ದು, ತಮಿಳುನಾಡಿನಿಂದ ಆರಂಭವಾಗಲಿದೆ. ಅದ್ರಂತೆ, ರಾಹುಲ್ ಗಾಂಧಿ ದೇಶಾದ್ಯಂತ 3,500 ಕಿಲೋ ಮೀಟರ್ ನಡೆಯಲು ಯೋಜಿಸಿದ್ದಾರೆ ಎನ್ನಲಾಗ್ತಿದೆ.
ಇನ್ನು ಇಂದು ಭಾರತ್ ಜೋಡೊ ಯಾತ್ರೆಗೆ ಎಐಸಿಸಿಯಿಂದ ಸಂಯೋಜಕರ ನೇಮಕ ಮಾಡಲಾಗಿದ್ದು, ಕರ್ನಾಟಕದ ಸಂಯೋಜಕರಾಗಿ ವಿಧಾನಪರಿಷತ್ನ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ನೇಮಕ ಮಾಡಲಿದೆ.
ಅದ್ರಂತೆ, ಕರ್ನಾಟಕದಲ್ಲಿ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ 15 ದಿನಗಳಲ್ಲಿ 12 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದ್ದು, ಈ ಮೂಲಕ ರಾಹುಲ್ 15 ದಿನ ರಾಜ್ಯ ಸುತ್ತಲಿದ್ದಾರೆ.