ಧಾರವಾಡ : ಸರ್ಕಾರ ಮತ್ತು ಕರ್ನಾಟಕ ಹಾಲು ಮಹಾಮಂಡಳಿಯ ಆದೇಶದಂತೆ ಧಾರವಾಡ ಹಾಲು ಒಕ್ಕೂಟದ ಪಶು ಆಹಾರ ಕಾರ್ಖಾನೆಗೆ ರೈತರಿಂದ ನೇರವಾಗಿ ಬೆಂಬಲ ಬೆಲೆ ಮೂಲಕ ಮೆಕ್ಕೆಜೋಳವನ್ನು ಖರೀದಿಸಲಾಗುವುದೆಂದು ಪಶು ಆಹಾರ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರಿಂದ ನೇರವಾಗಿ ಪಶು ಆಹಾರ ಘಟಕಕ್ಕೆ 25,000 ಮೆ.ಟನ್ ಮೆಕ್ಕಜೋಳವನ್ನು ಪ್ರತಿ ಕ್ವಿಂಟಾಲ್ಗೆ ರೂ.1,962/- ರಂತೆ ಸರ್ಕಾರದಿಂದ ನಿಗದಿಪಡಿಸಿ ಬೆಲೆ ನೀಡಿ ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಾಲ್ಗೆ 1,962 ರೂ. ಮತ್ತು ಪ್ರತಿ ಕ್ವಿಂಟಾಲ್ಗೆ ಸಾಗಾಣಿಕೆ ಪ್ರೋತ್ಸಾಹವಾಗಿ ರೂ.38/- ಸೇರಿಸಿ ಒಟ್ಟಾರೆ ರೂ.2,000/-ಗಳನ್ನು ನೀಡಿ ಖರೀದಿಸಲಾಗುತ್ತದೆ.
ವಿನಯ್ ಗುರೂಜಿ ಸಲಿಂಗಕಾಮಿ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ‘ಆಪ್ತ ಮಿತ್ರ’
ಧಾರವಾಡ ಪಶುಘಟಕ ವ್ಯಾಪ್ತಿಯ ಜಿಲ್ಲೆಗಳಾದ ಧಾರವಾಡ, ಹಾವೇರಿ, ಗದಗ, ಉಡುಪಿ, ಉತ್ತರಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ. ಹಾಲು ಒಕ್ಕೂಟಗಳ ಸಹಕಾರದೊಂದಿಗೆ ಸರ್ಕಾರದ ಕೃಷಿ ಇಲಾಖೆ ಸಿದ್ಧಪಡಿಸಿದ ಫ್ರೂಟ್ಸ್ ತಂತ್ರಾಂಶದ ಮತ್ತು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರಸಿರಿ ತಂತ್ರಾಂಶದ ಮೂಲಕ ನವೆಂಬರ್ 9 ರಿಂದ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 0836-2322671, 2322639 ಗೆ ಕರೆ ಮಾಡಬಹುದು ಎಂದು ಧಾರವಾಡ ಪಶು ಆಹಾರ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.