ನವದೆಹಲಿ : ರಾಯಿಟರ್ಸ್ ವರದಿಯ ಪ್ರಕಾರ, 2020ರಲ್ಲಿ ನಡೆದ ಮಾರಣಾಂತಿಕ ಗಡಿ ಘರ್ಷಣೆ ಏಷ್ಯಾದ ಪ್ರತಿಸ್ಪರ್ಧಿಗಳ ನಡುವಿನ ಸಂಬಂಧವನ್ನ ಹದಗೆಡಿಸಿದ ನಂತ್ರ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಶುಕ್ರವಾರ ಮುಖಾಮುಖಿಯಾಗಲಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ವರದಿಯ ಪ್ರಕಾರ, ಮೇ 2020ರ ನಂತ್ರ ಎಲ್ಎಸಿಯಲ್ಲಿ ಶಾಂತಿ ಮೂಡಿದ್ದು, ಭಾರತ ಮತ್ತು ಚೀನಾ ತನ್ನ ಸೇನೆಯನ್ನ ಹಿಂತೆಗೆದುಕೊಂಡಿದೆ. ಸಧ್ಯ ಯಥಾಸ್ಥಿತಿ ಕಾಯ್ದುಕೊಂಡ ನಂತ್ರ ಬೆಳವಣಿಗೆ ನಡೆದಿದೆ.
ವಿಶೇಷವೆಂದರೆ, ಶಾಂಘೈ ಸಹಕಾರ ಸಂಘಟನೆ (SCO) ಎಂದು ಕರೆಯಲ್ಪಡುವ ಪ್ರಾದೇಶಿಕ ಭದ್ರತಾ ಗುಂಪಿನ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಉಜ್ಬೇಕ್ ನಗರ ಸಮರ್ಕಂಡ್ಗೆ ಹಾರಲು ಸಜ್ಜಾಗಿದ್ದಾರೆ. ಈ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸಲಿದ್ದಾರೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.