ಬೆಂಗಳೂರು: ಪ್ರಜ್ವಲ್ ವಿಡಿಯೋ ನಾನೇ ಕೊಟ್ಟಿದ್ದು ನಾನೇ ಅಂಥ ಪ್ರಜ್ವಲ್ ಅವರ ಮಾಜಿ ಕಾರ್ತಿಕ್ ಚಾಲಕ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಅವರು ನಾನು ಅವರ ಬಳಿಕ ಕೆಲಸ ಮಾಡುತ್ತಿದ್ದೆ, ಅವರಿಂದ ನನಗೆ ಅನ್ಯಾಯವಾದ ಸಲುವಾಗಿ ನಾನು ಅಲ್ಲಿ ಕೆಲಸ ಬಿಟ್ಟೆ ಅಂತ ಹೇಳಿದೆ. ಇನ್ನೂ ನನ್ನ ವಿರುದ್ದ ನ್ಯಾಯಾಲಯದಿಂದ ಮಾನ ಹಾನಿ ಪ್ರಕರಣವನ್ನು ಪ್ರಕಟ ಮಾಡದಂತೆ ಪ್ರಜ್ವಲ್ ಆದೇಶವನ್ನು ತಂದರು ಅಂತ ಹೇಳಿದ್ದಾರೆ. ಇನ್ನೂ ನನ್ನ ಬಳಿ ಇರುವ ವಿಡಿಯೋ, ಪೋಟೋಗಳನ್ನು ಕೊಡುವಂತೆ ಜವರೇಗೌಡರು ಕೇಳಿದರು. ಇದಲ್ಲದೇ ಇದು ನಾನು ಕೋರ್ಟ್‌ಗೆ ನೀಡುವುದಾಗಿ ಹೇಳದಿದರು. ಕೆಲ ದಿನಳ ಬಳಿಕ ಈ ಬಗ್ಗೆ ಕೇಳಿದಾಗ ಮುಂದೆ ಈ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದರು ಅಂತ ಹೇಳಿದರು. ಇನ್ನೂ ನಾನು ಜವರೇಗೌಡರಿಗೆ ಬಿಟ್ರೇ ಯಾರಿಗೂ ಕೂಡ ವಿಡಿಯೋವನ್ನು ನೀಡಿಲ್ಲ, ಇದು ಹೇಗೆ ಬೇರೆಯವರಿಗೆ ರವಾನೆಯಾಗಿದೆ ಅಂಥ ತಿಳಿದಿಲ್ಲ. ನಾನು ಈಕೂಡಲೇ ಎಸ್‌ಐಟಿ ತನಿಖೆ ಮುಂದೆ ಹಾಜರಾಗಿ ನನಗೆ ತಿಳಿದಿರುವ ಬಗ್ಗೆ ಮಾಹಿತಿಯನ್ನು ನೀಡುವೆ ಅಂತ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಇಬ್ಬರೂ ಹೊಳೆನರಸೀಪುರ ಠಾಣೆ ಪೊಲೀಸರ ಮೂಲಕ ಬಲವಂತವಾಗಿ ಕರೆದೊಯ್ದು, ಹಿಂಸೆ ನೀಡಿದ್ದಾರೆ ಅಂತ ಕೆಲವು ದಿನಗಳ ಹಿಂಧೆ ಆರೋಪಿಸಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನಲ್ಲಿ ಇರುವ 13 ಎಕರೆ ಭೂಮಿಗಾಗಿ ತನಗೆ ಕಿರುಕುಳ ನೀಡಿದ್ದಾರೆ ಅಂತ ಕಾರ್ತಿಕ್ ಆರೋಪಿಸಿದ್ದರು. ದಶಕಗಳ ಕಾಲ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದ ಕಾರ್ತಿಕ್, ಇದೀಗ ಪ್ರಜ್ವಲ್ ರೇವಣ್ಣ, ಭವಾನಿ ವಿರುದ್ಧವೇ ದೂರು ನೀಡಿದ್ದಾರೆ. 2023ರ ಮಾರ್ಚ್ 12ರಂದು ತನ್ನನ್ನು ಕಿಡ್ನಾಪ್ ಮಾಡಿದ್ದರು ಅಂತ ಹೇಳಿದ್ದರು.