ಬಳ್ಳಾರಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2022-23ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಮಲ್ಲಿಕಾರ್ಜುನ.ಕೆ ಅವರು ತಿಳಿಸಿದ್ದಾರೆ.
BIGG NEWS : ಇಂದು ರಾಜ್ಯದ ಎಲ್ಲ ಪಶು ಆಸ್ಪತ್ರೆ, ಗೋಶಾಲೆಗಳಲ್ಲಿ `ಗೋಪೂಜೆ’ : ಸಚಿವ ಪ್ರಭು ಚವ್ಹಾಣ್ ಮಾಹಿತಿ
ಈ ಯೋಜನೆಯಡಿ ತಿಳಿಸಿರುವ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಜೋಳ (ನೀರಾವರಿ), ಕಡಲೆ (ನೀರಾವರಿ,ಮಳೆ ಆಶ್ರಿತ) ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ನೆಲಗಡಲೆ (ಶೇಂಗಾ) (ನೀರಾವರಿ), ಭತ್ತ (ನೀರಾವರಿ) ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ಬೆಳೆಗಳಾದ ಮುಸುಕಿನ ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ,ಮಳೆ ಆಶ್ರಿತ), ಕುಸುಮೆ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ) ಮತ್ತು ಬೇಸಿಗೆ ಹಂಗಾಮಿನ ಸೂರ್ಯಕಾಂತಿ (ನೀರಾವರಿ) ,ಈರುಳ್ಳಿ (ನೀರಾವರಿ) ಬಳ್ಳಾರಿ ಜಿಲ್ಲೆಯ ಬೆಳೆಗಳಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು.
*ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕಗಳು ಇಂತಿವೆ: ಹಿಂಗಾರು ಹಂಗಾಮಿನ ಬೆಳೆಗಳಾದ- ಜೋಳ (ನೀ)-ಡಿ.31, ಜೋಳ (ಮ)-ನ.15, ಮುಸುಕಿನ ಜೋಳ (ನೀ)-ಡಿ.31, ಕಡಲೆ (ನೀ,ಮ)-ಡಿ.31, ಹುರುಳಿ (ಮ)-ಡಿ.16, ಸೂರ್ಯಕಾಂತಿ (ನೀ,ಮ)-ಡಿ.16, ಕುಸುಮೆ (ಮ)-ಡಿ.16, ಈರುಳ್ಳಿ (ನೀ)-ನ.30, ಬೇಸಿಗೆ ಬೆಳೆಗಳಾದ ಭತ್ತ (ನೀ)-2023ನೇ ಫೆ.28, ನೆಲಗಡಲೆ (ಶೇಂಗಾ) (ನೀ)-2023ನೇ ಫೆ.28, ಸೂರ್ಯಕಾಂತಿ (ನೀ)-2023ನೇ ಫೆ.28 ಮತ್ತು ಈರುಳ್ಳಿ (ನೀ)-2023ನೇ ಫೆ.28ರಂದು ಆಗಿರುತ್ತದೆ.
ಈ ಮೇಲ್ಕಂಡ ನಿಗದಿಪಡಿಸಿದ ಅವಧಿಯೊಳಗೆ ರೈತರು ಬ್ಯಾಂಕುಗಳಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ತಿಳಿಸಿದ್ದು, ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು (Common Service Centers) ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮತ್ತು ದೂ.08392-276224 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.