* ಅವಿನಾಶ್ ಆರ್ ಭೀಮಸಂದ್ರ
ನವದೆಹಲಿ: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ನಟ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಮತ್ತು ಲಕ್ಷ್ಮಣ್, ನಾಗರಾಜ್, ಪ್ರದೋಷ್, ಅನು ಕುಮಾರ್ ಮತ್ತು ಜಗದೀಶ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು ಈ ಹಿಂಧೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು, ಹಾಗೂ ಜಾಮೀನು ನೀಡಿದ್ದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ.
ಈ ನಡುವೆ ದರ್ಶನ್‌ಗಾಗಿ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೆ ಪೊಲೀಸರು ಮುಂದಾಗಿದ್ದು, ಎಲ್ಲರ ಚಲವನಗಳ ಮೇಲೆ ಗಮನ ಇಟ್ಟಿದ್ದಾರೆ ಎನ್ನಲಾಗಿದೆ.ಇನ್ನೂ ಕೆಲವು ಮಾಧ್ಯಮಗಳ ವರದಿ ಪ್ರಕಾರ ದರ್ಶನ್ ತಮಿಳುನಾಡಿನ ಕಡೆಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಪವಿತ್ರಗೌಡ ತಮ್ಮ ಮನೆಯಲ್ಲಿ ಇದ್ದು ಸದ್ಯದಲ್ಲೇ ಅವರನ್ನು ಕಾನೂನು ರೀತಿಯಲ್ಲಿ ತಮ್ಮ ವಶಕ್ಕೆ ಪಡೆದುಕೊಂಡು ಇಂದು ಸಂಜೆಯೊಳಗೆ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಕಳುಹಿಸುವುದಕ್ಕೆ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನೂ ವಕೀಲರ ಜೊತೆಗೆ ದರ್ಶನ್ ಸಂಪರ್ಕದಲ್ಲಿದ್ದು, ಸದ್ಯ ಅವರು ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ದರ್ಶನ್ ನನ್ನು ತಮ್ಮ ವಶಕ್ಕೆ ಪಡೆದುಕೊಂಡ ಬಳಿಕ ಮತ್ತೆ ಅವರನ್ನು ಬಳ್ಲಾರಿಯಲ್ಲಿರುವ ಜೈಲಿಗೆ ಬಿಡಲಾಗುತ್ತದೆ ಎನ್ನಲಾಗಿದ್ದು, ಸದ್ಯ ಬಳ್ಳಾರಿ ಜೈಲಿನಲ್ಲಿ ಎಲ್ಲಾ ಮುಂಜಾಗ್ರತ ಕ್ರಮವಾಗಿ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತಿದೆ.ದರ್ಶನ್ ಅವರ ಗೆಳತಿ ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ 33 ವರ್ಷದ ಅಭಿಮಾನಿ ಎಸ್. ರೇಣುಕಸ್ವಾಮಿ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾದ 17 ಜನರಲ್ಲಿ ದರ್ಶನ್ ಕೂಡ ಒಬ್ಬರು.