ಚಿತ್ರದುರ್ಗ : ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ಪೊಲೀಸರು ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆಯಲ್ಲಿ ಪೊಲೀಸರ ಎದುರು ಬಸವರಾಜನ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ.
ಇನ್ಮುಂದೆ ಕೇವಲ QR ಕೋಡ್ ಮೂಲಕವೂ ATMನಿಂದ ಹಣ ಹಿಂಪಡೆಯಬಹುದು!… ಅದೇಗೆ ಅಂತಾ ಇಲ್ಲಿ ನೋಡಿ
ಮುರುಘಾಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸುವ ಪಿತೂರಿ ನಡೆದಿದೆ ಎಂಬ ದೂರಿನಲ್ಲಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಸಹ ಬಂಧಿಸಲಾಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಎಸ್.ಕೆ.ಬಸವರಾಜನ್ ವಿಚಾರಣೆ ನಡೆಸುತ್ತಿದ್ದಾರೆ.
ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು,ವಿಚಾರಣೆ ವೇಳೆ ಬಸವರಾಜನ್ ಪೊಲೀಸರ ಪ್ರಶ್ನೆಗೆ ಒಂದೇ ಉತ್ತರ ನೀಡುತ್ತಿದ್ದಾನೆ. ಇದೆಲ್ಲವೂ ಮುರುಘೇಶ ಮಾಡಿಸಿದ್ದು ಎಂದು ಮಠದ ದೈವದ ಮೇಲೆ ಹೇಳುತ್ತಿದ್ದಾನೆ. ನಾನೇನು ಪಿತೂರಿ ಮಾಡಿಲ್ಲ ಎಂದು ಹೇಳುತ್ತಿದ್ದಾನೆ ಎನ್ನಲಾಗಿದೆ.