ಕೆಎನ್ಎನ್ಡಿಜಿಟಲ್ ಡೆಸ್ಕ್ : ಬುಧವಾರ ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರು, ಆದರೆ ಅವರು ಈಗ 2024ರ ಚುನಾವಣೆಯ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು.
ರಾಜ್ಯಪಾಲ ಫಗು ಚೌಹಾಣ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ನಿತೀಶ್, ಹೊಸ ಸರ್ಕಾರವು ತನ್ನ ಪೂರ್ಣಾವಧಿಯಲ್ಲಿ ಉಳಿಯುವುದಿಲ್ಲ ಎಂಬ ಬಿಜೆಪಿಯ ಹೇಳಿಕೆಯನ್ನ ತಳ್ಳಿಹಾಕಿದರು. ಇನ್ನು ತಮ್ಮ ಮಾಜಿ ಮಿತ್ರ ಪಕ್ಷವು “2015ರ ವಿಧಾನಸಭಾ ಚುನಾವಣೆಯ ನಂತ್ರ ಅವರು ಇದ್ದ ಸ್ಥಳಕ್ಕೆ ಮರಳುತ್ತದೆ” ಎಂದು ಹೇಳಿದರು.
“2014ರಲ್ಲಿ ಅಧಿಕಾರಕ್ಕೆ ಬಂದವರು, ಅವರು 2024ರಲ್ಲಿ ಗೆಲ್ಲುತ್ತಾರೆಯೇ? 2024ಕ್ಕೆ ಎಲ್ಲಾ (ಪ್ರತಿಪಕ್ಷಗಳು) ಒಂದಾಗಬೇಕೆಂದು ನಾನು ಬಯಸುತ್ತೇನೆ. ಅಂತಹ ಯಾವುದೇ ಹುದ್ದೆಗೆ (ಪ್ರಧಾನಿ ಹುದ್ದೆ) ನಾನು ಸ್ಪರ್ಧಿ ಅಲ್ಲ” ಎಂದು ಕುಮಾರ್ ಹೇಳಿದರು.
ಅಂದ್ಹಾಗೆ, 77 ಶಾಸಕರನ್ನ ಹೊಂದಿರುವ ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾದ ಬಿಜೆಪಿಯ ನಾಯಕರು ರಾಜಭವನದ ಒಳಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೈರುಹಾಜರಾಗುವುದು ಎದ್ದು ಕಾಣುತ್ತಿತ್ತು.