ಕೆಎನ್ಎನ್ಡಿಜಿಟಲ್ ಡೆಸ್ಕ್ : , ವಿಮಾನದಲ್ಲಿದ್ದ ಪೈಲಟ್ಗಳು ನಿದ್ರೆಗೆ ಜಾರಿದ್ದು, ಇಥಿಯೋಪಿಯನ್ ಏರ್ಲೈನ್ಸ್ ವಿಮಾನವು ಲ್ಯಾಂಡಿಂಗ್ ತಪ್ಪಿಸಿಕೊಂಡಿದೆ. ಸುಡಾನ್ʼನ ಖಾರ್ಟೂಮ್ʼನಿಂದ ಇಥಿಯೋಪಿಯಾದ ರಾಜಧಾನಿ ಅಡಿಸ್ ಅಬಾಬಾಗೆ ವಿಮಾನವು ಹಾರಾಟ ನಡೆಸುತ್ತಿದ್ದಾಗ ಈ ಘಟನೆ ಸೋಮವಾರ ಸಂಭವಿಸಿದೆ.
ಏವಿಯೇಷನ್ ಹೆರಾಲ್ಡ್ ಪ್ರಕಾರ, ವಿಮಾನವು ವಿಮಾನ ನಿಲ್ದಾಣವನ್ನ ಸಮೀಪಿಸಿದಾಗ ಏರ್ ಟ್ರಾಫಿಕ್ ಕಂಟ್ರೋಲ್ (ATC) ಎಚ್ಚರಿಕೆ ರವಾನಿಸಿದೆ. ಆದ್ರೆ, ಲ್ಯಾಂಡಿಂಗ್ ಮಾಡಲಿಲ್ಲ. ವಿಮಾನವು ಆಟೋಪೈಲಟ್ ಮೋಡ್ʼನಲ್ಲಿದ್ದು, ವಿಮಾನ 37,000 ಅಡಿ ಎತ್ತರದಲ್ಲಿ ಚಲಿಸಲಿದೆ.
ಏವಿಯೇಷನ್ ಹೆರಾಲ್ಡ್ ಸಹ ಎಟಿಸಿ ವಿಮಾನ ಇಟಿ 343ರ ಪೈಲಟ್ʼಗಳನ್ನ ಸಂಪರ್ಕಿಸಲು ಹಲವಾರು ಬಾರಿ ಪ್ರಯತ್ನಿಸಿತು. ಆದ್ರೆ, ಅವರನ್ನ ತಲುಪಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ. “ವಿಮಾನವು ಇಳಿಯಬೇಕಿದ್ದ ರನ್ವೇಯನ್ನ ಓವರ್ಫ್ಲೋವ್ ಮಾಡಿದಾಗ, ಆಟೋಪೈಲಟ್ ಸಂಪರ್ಕ ಕಡಿದುಕೊಂಡಿತು. ಇದು ಅಲಾರಾಂನ್ನ ಪ್ರಚೋದಿಸಿತು, ಅದು ಪೈಲಟ್ʼಗಳನ್ನ ಎಚ್ಚರಗೊಳಿಸಿತು” ಎಂದಿದೆ.
ನಂತ್ರ ಅವ್ರು 25 ನಿಮಿಷಗಳದ್ಮೇಲೆ ರನ್ವೇಯಲ್ಲಿ ವಿಮಾನವನ್ನ ಕುಶಲತೆಯಿಂದ ಇಳಿಸಿದರು. ಆದಾಗ್ಯೂ, ವಿಮಾನವು ಸುರಕ್ಷಿತವಾಗಿ ಇಳಿಯಿತು ಎಂದು ಔಟ್ಲೆಟ್ ಹೇಳಿದೆ.
ವಾಯುಯಾನ ಕಣ್ಗಾವಲು ವ್ಯವಸ್ಥೆ ಎಡಿಎಸ್-ಬಿ ಈ ಘಟನೆಯನ್ನ ದೃಢಪಡಿಸಿದ್ದು, ವಿಮಾನದ ಹಾರಾಟ ಮಾರ್ಗದ ಫೋಟೋವನ್ನ ಪೋಸ್ಟ್ ಮಾಡಿದೆ, ಇದು ಅಡಿಸ್ ಅಬಾಬಾ ವಿಮಾನ ನಿಲ್ದಾಣದ ಬಳಿ ಅನಂತದಂತಹ ಕುಣಿಕೆಯನ್ನ ತೋರಿಸುತ್ತದೆ.
ಅಂದ್ಹಾಗೆ, ಈ ವರ್ಷದ ಆರಂಭದಲ್ಲಿಯೂ ನ್ಯೂಯಾರ್ಕ್ನಿಂದ ರೋಮ್ಗೆ ತೆರಳುತ್ತಿದ್ದ ವಿಮಾನದಲ್ಲಿ ಇಬ್ಬರು ಪೈಲಟ್ಗಳು ನಿದ್ರೆಗೆ ಜಾರಿದಾಗ ಇದೇ ರೀತಿಯ ಘಟನೆ ನಡೆದಿತ್ತು. ಆ ವಿಮಾನ ಭೂಮಿಯಿಂದ 38,000 ಅಡಿ ಎತ್ತರದಲ್ಲಿ ಚಲಿಸಿತ್ತು.