ಬೆಂಗಳೂರು: ನಾಳೆಯಿಂದಲೇ ಪೆಟ್ರೋಲ್ ಬಂಕ್ಗಳಲ್ಲಿ ತೈಲಬೆಲೆ ದರಪಟ್ಟಿ ಕನ್ನಡದಲ್ಲಿ ಇರಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮಗಳ ಮಾಹಿತಿ, ಕರ್ನಾಟಕದಲ್ಲಿ ಕನ್ನಡದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆಗಳ ದರಪಟ್ಟಿ ಪ್ರಕಟಿಸುವಂತೆ ಮನವಿ ಬಂದಿದ್ದು, ತಕ್ಷಣವೇ ಇನ್ಮುಂದೆ ಕನ್ನಡದಲ್ಲಿಯೂ ತೈಲಬೆಲೆ ಪ್ರಕಟಿಸುತ್ತಿದ್ದು, ಇಂದು ರಾಜ್ಯದ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿಯೂ ಕನ್ನಡದಲ್ಲೂ ದರಪಟ್ಟಿ ಪ್ರಕಟಕ್ಕೆ ಕ್ರಮ ಕೈಗೊಳ್ಳುವಂತೆ ತೈಲಕಂಪನಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಇದೇ ವೇಳೆ ಅವರುವಿಕಸಿತ್ ಭಾರತ್ ಕಾರ್ಯಕ್ರಮ ನಡೆಯುತ್ತಿದೆ. ಕೇರಳ ಕಾರ್ಯಕ್ರಮ ಮುಗಿಸಿ ನಿನ್ನೆಯಿಂದ ಕರ್ನಾಟಕಕ್ಕೆ ಬಂದಿದ್ದೇನೆ. ಹಾಸನ ಭಾಗದಲ್ಲಿ ಓಡಾಡಿ ಬಂದೆ, ಉತ್ತಮ ಚರ್ಚೆ ಕೂಡ ನಡೆದಿದೆ. ಕೇಂದ್ರದ ಯೋಜನೆಗಳನ್ನ ಜನರಿಗೆ ತಿಳಿಸುವ ಕೆಲಸ ಆಗಿದೆ. ಫಲಾನುಭವಿಗಳನ್ನ ತಲುಪುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ ಅವರು ಮಾತನಾಡಿ, 45 ಸಾವಿರ ಬ್ಯಾರೆಲ್ ಕಚ್ಚಾತೈಲವನ್ನ ಮೇ ಹಾಗೂ ಜೂನ್ನಲ್ಲಿ ಹೊರತೆಗೆಯುತ್ತಿದ್ದೇವೆ. ಇದು ನಮ್ಮ ಉತ್ಪಾದನೆಯ ಶೇ. 7% ರಷ್ಟಾಗಲಿದೆ. ಇದರ ಜೊತೆ ಶೇ 7%ರಷ್ಟು ಅನಿಲ ಕೂಡ ಲಭ್ಯವಾಗಲಿದೆ ಎಂದರು.