ಬೆಂಗಳೂರು: ರೌಡಿಶೀಟರ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿ ಆಗಿದ್ದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರ ಟೀಕೆಗೆ ಟ್ವೀಟ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಭೂಗತ ಪಾತಕಿಗಳ ಗರಡಿಯಲ್ಲಿ ಬೆಳೆದ ಡಿ .ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಭೂಗತ ಪಾತಕಿಗಳ ಗರಡಿಯಲ್ಲಿ ಬೆಳೆದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕೊಲೆ ಆರೋಪಿ ವಿನಯ್ ಕುಲಕರ್ಣಿ, ಗೂಂಡಾಗಿರಿಯ ಮೊಹಮ್ಮದ್ ನಲಪಾಡ್ ಕಾಂಗ್ರೆಸ್ ನ ದ ನಾಯಕರು!. ಕಾಂಗ್ರೆಸ್ ರೌಡಿಗಳನ್ನು ಖಂಡಿಸುತ್ತದೆಯಂತೆ! ಮೊದಲು ನಿಮ್ಮ ಪಕ್ಷದ ನಾಯಕರ “ಆ ದಿನಗಳು” ಹೇಗಿವೆ ಅಂತ ನೋಡಿ.
ಗೂಂಡಾಗಿರಿ, ರೌಡಿಸಂ ಮೇರಿಟ್ ಅಂತ ಪರಿಗಣಿಸಿ, ವಿರೋಧದ ನಡುವೆಯೂ ನಲಪಾಡ್ ಇತ್ತೀಚೆಗೆ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದರು. ನಿಮಗೆ ಯೂತ್ ಕಾಂಗ್ರೆಸ್ ಅಧ್ಯಕ್ಷರ “ಆ ದಿನಗಳು” ಮರೆತು ಹೋಗಿದೆಯಾ ಕಾಂಗ್ರೆಸ್? ಒಂದು ಕಾಲದಲ್ಲಿ ಕೊತ್ವಾಲ್ನ ನೆಚ್ಚಿನ ಶಿಷ್ಯ! ತಿಹಾರ್ ಜೈಲಿನಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಭಡ್ತಿ. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರ “ಆ ದಿನಗಳು” ಮರೆತು ಹೋಗಿದೆಯಾ? ಎಂದು ಲೇವಡಿ ಮಾಡಿದೆ.