ಬೆಂಗಳೂರು : ಆಟೋ ಯೂನಿಯನ್ ಓಲಾ ಮತ್ತು ಉಬರ್ಗಳಿಗೆ ಸ್ಪರ್ಧೆ ನೀಡಲು ನವೆಂಬರ್ 1 ರ ಇಂದು ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲು ಮುಂದಾಗಿದೆ. ಆಪ್ ಆಧಾರಿಯಆಪ್-ಆಧಾರಿತ ಅಗ್ರಿಗೇಟರ್ಗಳಾದ ಓಲಾ ಮತ್ತು ಉಬರ್ ಗಳೊಂದಿಗೆ ಸ್ಪರ್ಧಿಸಲು ಮುಂದಾಗಿರುವ ಬೆಂಗಳೂರಿನ ಟ್ಯಾಕ್ಸಿ ಚಾಲಕರು ತಮ್ಮ ಮೊಬೈಲ್ ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ.
‘ನಮ್ಮ ಯಾತ್ರಿ’ ಅಪ್ಲಿಕೇಶನ್ ಅನ್ನು ನವೆಂಬರ್ 1 ರಂದು ಆಟೋರಿಕ್ಷಾ ಯೂನಿಯನ್(ARDU) ಮತ್ತು ನಂದನ್ ನಿಲೇಕಣಿ ಬೆಂಬಲಿಸುವ ಬೆಕ್ನ್ ಫೌಂಡೇಶನ್ ಬಿಡುಗಡೆ ಮಾಡಲಿದೆ.
ಆಯಪ್ ಆಧಾರಿತ ಅಗ್ರಿಗೇಟರ್ ಗಳು ಗ್ರಾಹಕರಿಂದ ಕನಿಷ್ಠ 100 ರೂ. ದರ ವಿಧಿಸುತ್ತಾರೆ. 60 ರೂ. ಚಾಲಕರಿಗೆ ನೀಡುತ್ತಾರೆ. ಉಳಿದ 40 ರೂ. ಕಮಿಷನ್ ಆಗಿ ತೆಗೆದುಕೊಳ್ಳುತ್ತಾರೆ. ಅವರು ದರ ಏರಿಕೆ ಮಾಡಿದ ನಂತರ ಗ್ರಾಹಕರಲ್ಲಿ ಶೇಕಡ 50-60 ರಷ್ಟು ಇಳಿಕೆಯಾಗಿದೆ. ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ.
ಈಗ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಲು ಬಯಸುವವರು ಮತ್ತು ವಾಹನಗಳಿಲ್ಲದವರು ಮಾತ್ರ ಈ ದರವನ್ನು ಪಾವತಿಸತೊಡಗಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆಗೆ ದೂರು ನೀಡಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಮ್ಮ ಯಾತ್ರಿ ಅಪ್ಲಿಕೇಶನ್ ಅನ್ನು ನವೆಂಬರ್ 1 ರಿಂದ ಪ್ರಾರಂಭಿಸಲು ಒಕ್ಕೂಟವು ಯೋಜಿಸಿದೆ.
ಸರ್ಕಾರ ನಿಗದಿಪಡಿಸಿದ ದರ ಪಡೆಯಲಿದ್ದು, ಹೆಚ್ಚುವರಿಯಾಗಿ 10 ರೂ.ಗಳನ್ನು ಪಿಕ್-ಅಪ್ ಶುಲ್ಕವಾಗಿ ಸಂಗ್ರಹಿಸಲಾಗುವುದು. 2 ಕಿಮೀ ವ್ಯಾಪ್ತಿಯಲ್ಲಿ ಫ್ಲಾಟ್ 40 ರೂ. ದರ ವಿಧಿಸಲು ಯೋಜಿಸಲಾಗಿದೆ. ಇದರಿಂದ ಆಟೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎನ್ನುವುದು ಆಟೋ ಚಾಲಕರ ಸಂಘದ ಪದಾಧಿಕಾರಿಗಳ ಅಭಿಪ್ರಾಯವಾಗಿದೆ.