ಬೆಂಗಳೂರು: ಇಂದಿನಿಂದ ಉಬರ್, ಓಲೋ ಆಟೋ ಓಡಾಡುವಂತಿಲ್ಲ, ಈ ರೀತಿ ಸಂಚಾರ ಮಾಡಿದ್ರೆ 5 ಸಾವಿರದ ತನಕ ದಂಡ ಫಿಕ್ಸ್ ಅಂತ ಸಾರಿಗೆ ಆಯುಕ್ತ ಕುಮಾರ್ ಅವರು ತಿಳಿಸಿದ್ದಾರೆ. ದುಬಾರಿ ದರ ವಸೂಲಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ, ಸಾರಿಗೆ ಇಲಾಖೆಯಿಂದ ( Transport Department ) ನಿನ್ನೆ ಓಲಾ, ಊಬರ್ ಸಂಸ್ಥೆಗಳ ( Ola, Uber Service ) ಜೊತೆಗೆ ಮಹತ್ವದ ಸಭೆ ನಡೆಸಿದೆ.
BIGG NEWS : ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ 5 ಸಾವಿರ ಕೋಟಿ. ರೂ ಅನುದಾನ : ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಊಬರ್, ಓಲಾ ಆಟೋಗಳು ಇನ್ನು ಮುಂದೆ ಜಿಎಸ್ಟಿ ಮತ್ತು ಆಟೋ ಬಾಡಿಕೆ ಸೇರಿ ಕಿ.ಮೀ. 30 ರೂ ಪಡೆಯಬೇಕೆಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ. ಸಾರಿಗೆ ಇಲಾಖೆ ಆಯುಕ್ತ ಟಿ. ಹೆಚ್. ಎಮ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಾರಿಗೆ ಇಲಾಖೆಯ ಈ ನಿರ್ಧಾರಕ್ಕೆ ಉಬರ್, ಓಲಾ ಕಂಪನಿಗಳು ಒಪ್ಪಿಗೆ ನೀಡಿವೆ ಆಟೋ ಚಾಲಕರು ಸಲ್ಲಿಸುವ ಮನವಿಯನ್ನ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಸಾರಿಗೆ ಇಲಾಖೆ ಸಚಿವರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
BIGG NEWS : ರಾಜ್ಯದಲ್ಲಿ ‘SSLC-PUC’ ಪರೀಕ್ಷಾ ಮಂಡಳಿಗಳ ವಿಲೀನ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ
ಉಬರ್, ಓಲಾ ಕಂಪನಿಗೆ ನೀಡಿದ್ದ ಗಡುವು ಅಂತ್ಯ ಹಿನ್ನೆಲೆ ಬೆಂಗಳೂರಿನ ಜಯನಗರ ವ್ಯಾಪ್ತಿಯಲ್ಲಿ ಆರ್ಟಿಒ ಅಧಿಕಾರಿಗಳಿಂದ ವಾಹನಗಳನ್ನು ಸೀಜ್ ಮಾಡಲಾಗಿದೆ. ಈ ಬೆನ್ನಲ್ಲೇ ಆರ್ಟಿಒ ಅಧಿಕಾರಿಗಳ ಕ್ರಮ ಖಂಡಿಸಿ, ಬೀದಿಗಿಳಿದು ಪ್ರತಿಭಟನೆ ನಡೆಸಲಾಗಿತ್ತು.
ಬೆಂಗಳೂರಿನಲ್ಲಿ ಆಟೋ ಸೇವೆಗೆ ಮೀಡಿಯೇಟರ್ ಆಗಿರುವ ಓಲಾ-ಉಬರ್ ಸಂಸ್ಥೆಗಳು ಪ್ಲಾಟ್ಫಾರ್ಮ್ ಹೆಸ್ರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡ್ತಿವೆ. ಸ್ವತಃ ಸಾರಿಗೆ ಇಲಾಖೆಯೇ ಆನ್ಲೈನ್ ಆಟೋ ಸೇವೆ ಅಕ್ರಮ ಅಂತ ಹೇಳಿದೆ. ತಮ್ಮ ಸೇವೆ ನಿಲ್ಲಿಸುವಂತೆ ತಾಕೀತು ಮಾಡಿ ನೋಟಿಸ್ ನೀಡಿದೆ. ಆದ್ರೆ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಡೋಂಟ್ ಕೇರ್ ಅಂತಿವೆ. ಆ್ಯಪ್ ಆಟೋ ಕಂಡರೆ ಸಹಾಯವಾಣಿ 9449863429, 9449863426 ಸಂಖ್ಯೆಗೆ ಕರೆ ಮಾಡುವಂತೆ ಸೂಚನೆ ನೀಡಲಾಗಿದೆ.
ಓಲಾ, ಉಬರ್, ರಾಪಿಡೋ ವಿರುದ್ಧ ಸಾಲು ಸಾಲು ದೂರುಗಳು ಕೇಳಿ ಬರ್ತಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇಷ್ಟು ವರ್ಷ ಸುಮ್ಮನೆ ಕುಳಿತಿದ್ದ ಅಧಿಕಾರಿಗಳು ಈಗ, ನಾವು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಕೊಟ್ಟಿರೋದು. ಆಟೋ ಸೇವೆ ನಿಲ್ಲಿಸಿ ಅಂತ ಓಲಾ, ಉಬರ್, ರ್ಯಾಪಿಡೋಗೆ ನೋಟಿಸ್ ನೀಡಿ 3 ದಿನ ಗಡುವು ನೀಡಿತ್ತು. ಆದ್ರೆ ಕೊಟ್ಟ ಕಾಲಾವಕಾಶ ಮುಗಿದ್ರೂ ಅಧಿಕಾರಿಗಳು ಯಾವುದೇ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡಿಲ್ಲ.