ಕೆಎನ್ಎನ್ಡಿಜಿಟಲ್ ಡೆಸ್ಕ್ : ಮುಂಬೈ ಮೂಲದ ಚಿನ್ಮಯ್ ಮೂರ್ಜಾನಿ ಜಂಟಿ ಪ್ರವೇಶ ಪರೀಕ್ಷೆ (JEE) ಮುಖ್ಯ 2022ರ ಮೊದಲ ಸೆಷನ್ನಲ್ಲಿ 99.956 ಪ್ರತಿಶತ ಅಂಕಗಳನ್ನ ಗಳಿಸಿ, ಟಾಪರ್ʼಗಳಲ್ಲಿ ಸೇರಿದ್ದಾರೆ. ಆದಾಗ್ಯೂ, ಚಿನ್ಮಯ್ಗೆ ಈ ಅಂಕದಿಂದ ತೃಪ್ತಿಯಾಗಿಲ್ಲ. ಎರಡನೇ ಬಾರಿಗೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಹೌದು, ಜುಲೈ 21ರಿಂದ ನಡೆಯಲಿರುವ ಎಂಜಿನಿಯರಿಂಗ್ ಪ್ರವೇಶದ ಎರಡನೇ ಸೆಷನ್ಗೆ ಹಾಜರಾಗಲು ಯೋಜಿಸಿದ್ದೇನೆ ಎಂದು 17 ವರ್ಷದ ಈ ಬಾಲಕ ಹೇಳಿದ್ದಾನೆ. “ನಾನು ಜೆಇಇ ಮೇನ್ಸ್ 2ನೇ ಸೆಷನ್ ಪರೀಕ್ಷೆಯನ್ನ ಸಹ ಬರೆಯುತ್ತೇನೆ. ಯಾಕಂದ್ರೆ, ಇದು ನನ್ನ ಸ್ಕೋರ್ ಹೆಚ್ಚಿಸಲು ನನಗೆ ಸಹಾಯ ಮಾಡುತ್ತೆ” ಎಂದಿದ್ದಾನೆ.
ಅಂದ್ಹಾಗೆ, ಚಿನ್ಮಯ್ 2020ರಲ್ಲಿ ತಮ್ಮ 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನ ಪೂರ್ಣಗೊಳಿಸಿದ ನಂತ್ರ ತನ್ನ ಸಿದ್ಧತೆಗಳನ್ನ ಪ್ರಾರಂಭಿಸಿದ. ಎಂಜಿನಿಯರಿಂಗ್ ಬಗ್ಗೆ ಯಾವಾಗ್ಲೂ ಆಸಕ್ತಿ ಹೊಂದಿರುವ ಚಿನ್ಮಯ್, ಈಗ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮತ್ತು ದೇಶದ ಉನ್ನತ ಐಐಟಿಗಳಲ್ಲಿ ಒಂದರಲ್ಲಿ ಸ್ಥಾನ ಪಡೆಯಲು ಯೋಜಿಸಿದ್ದಾನೆ. “ನಾನು ನನ್ನ ಬಾಲ್ಯದಿಂದಲೂ ಎಂಜಿನಿಯರಿಂಗ್ ಬಗ್ಗೆ ಉತ್ಸುಕನಾಗಿದ್ದೇನೆ. ಉನ್ನತ ಐಐಟಿಗೆ ಪ್ರವೇಶ ಪಡೆಯುವುದು ನನ್ನ ಗುರಿಯಾಗಿದೆ” ಎನ್ನುತ್ತಾನೆ ಚಿನ್ಮಯ್.
ಇನ್ನು ಟಾಪರ್ ಚಿನ್ಮಯ್, 10ನೇ ಬೋರ್ಡ್ ಪರೀಕ್ಷೆಯನ್ನ ಪೂರ್ಣಗೊಳಿಸಿದ ಕೂಡಲೇ ಜೆಇಇ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸಿದನಂತೆ. “ಪರೀಕ್ಷೆಗೆ ತಯಾರಿ ನಡೆಸುವಾಗ ನಾನು ವಿವರವಾದ ಟಿಪ್ಪಣಿಗಳನ್ನ ಮಾಡಿದ್ದೇನೆ ಮತ್ತು ನಾನು ಅಧ್ಯಯನ ಸಾಮಗ್ರಿಗಳನ್ನ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದ್ದೇನೆ ಎಂದು ಖಚಿತಪಡಿಸಿಕೊಂಡೆ. ಇದಲ್ಲದೇ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನ ಪರಿಹರಿಸಿದೆ ಮತ್ತು ಪ್ರತಿ ವಾರ ಎರಡು – ಮೂರು ಅಣಕು ಪರೀಕ್ಷೆಗಳನ್ನ ತೆಗೆದುಕೊಂಡೆ. ಇದಲ್ಲದೇ, ನಾನು ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಲೈವ್ ಸಂದೇಹ ಪರಿಹರಿಸುವ ತರಗತಿಗಳಿಗೆ ಹಾಜರಾಗಿದೆ” ಎಂದರು. ಅಂದ್ಹಾಗೆ ಚಿನ್ಮಯ್, ಅನ್ಅಕಾಡೆಮಿಯಲ್ಲಿ ಆನ್ಲೈನ್ ಕೋಚಿಂಗ್ ಆಯ್ಕೆ ಮಾಡಿಕೊಂಡಿದ್ದ.
ಚಿನ್ಮಯ್ ತಂದೆ ವಾಸ್ತುಶಿಲ್ಪಿಯಾಗಿದ್ದು, ತಾಯಿ ಗೃಹಿಣಿ. ಇನ್ನು ಚಿನ್ಮಯ್ಗೆ 8ನೇ ತರಗತಿಯಲ್ಲಿ ಓದುತ್ತಿರುವ ಕಿರಿಯ ಸಹೋದರಿಯೂ ಇದ್ದಾಳೆ. 10 ಮತ್ತು 12ನೇ ತರಗತಿಯನ್ನ ಸಿಬಿಎಸ್ಇ ಬೋರ್ಡ್ ಸಂಯೋಜಿತ ರಯಾನ್ ಇಂಟರ್ ನ್ಯಾಷಿನಲ್ ಸ್ಕೂಲ್ನಿಂದ ಪೂರ್ಣಗೊಳಿಸಿದ ಚಿನ್ಮಯ್, 10ನೇ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 98ರಷ್ಟು ಅಂಕಗಳನ್ನ ಗಳಿಸಿದ್ದಾನೆ. ಸಧ್ಯ 12ನೇ ಫಲಿತಾಂಶಕ್ಕಾಗಿ ಕಾಯುತ್ತಿದ್ದಾನೆ.
ಜೆಇಇ ಮೇನ್ 2022 ಸೆಷನ್ 2ಗಾಗಿ ಕುಳಿತುಕೊಳ್ಳಲು ಚಿನ್ಮಯ್ ಒಬ್ಬರೇ ಯೋಜಿಸುತ್ತಿಲ್ಲ. ಮೊದಲ ಸೆಷನ್ನಲ್ಲಿ ಪೂರ್ಣ ಅಂಕ ಅಥವಾ 100 ಪ್ರತಿಶತ ಅಂಕಗಳನ್ನ ಗಳಿಸಿದ ರಾಜಸ್ಥಾನದ ನವ್ಯಾ ಹಿಸಾರಿಯಾ ಕೂಡ ಮುಂದಿನ ಸೆಷನ್ಗೆ ಕುಳಿತುಕೊಳ್ಳಲು ಯೋಜಿಸಿದ್ದಾರೆ. ಟಾಪರ್ ಜೆಇಇ ಮೇನ್ 2022ರ 2ನೇ ಸೆಷನ್ಗರ ಅಭ್ಯಾಸಕ್ಕಾಗಿ ಹಾಜರಾಗಲು ಉದ್ದೇಶಿಸಿದ್ದಾರೆ. ಅಂದ್ಹಾಗೆ, ಈ ವಿದ್ಯಾರ್ಥಿಗಳು 2ನೇ ಅವಧಿಯಲ್ಲಿ ಕಡಿಮೆ ಅಂಕಗಳನ್ನ ಪಡೆದ್ರೂ ನಷ್ಟವಿಲ್ಲ. ಯಾಕಂದ್ರೆ, ನಿಯಮಗಳ ಪ್ರಕಾರ, ಎರಡು ಪ್ರಯತ್ನಗಳ ಅತ್ಯುತ್ತಮ ಅಂಕಗಳನ್ನ ಅಂತಿಮ ಫಲಿತಾಂಶದಲ್ಲಿ ಎಣಿಸಲಾಗುತ್ತೆ.