ಮಂಗಳೂರು : ಡಿಸೆಂಬರ್ 25 ರಂದು ರಾಜ್ಯದ 20 ಸಾವಿರ ಅಂಗನವಾಡಿ ಹಾಗೂ 6 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
BIGG NEWS : ಇಂದು ಸಂಜೆ ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಸಿಎಂ ಬೊಮ್ಮಾಯಿ ಚಾಲನೆ|Kadlekai Parishe
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯ ಪಠ್ಯಕ್ರಮ ನವೆಂಬರ್ ತಿಂಗಳಾಂತ್ಯಕ್ಕೆ ಬರಲಿದೆ. 1,2 ನೇ ತರಗತಿಗೆ ಎರಡೆರಡು ಪುಸ್ತಕ ಇರುತ್ತದೆ. ಒಂದು ಸಂಖ್ಯಾಶಾಸ್ತ್ರ ವಿಚಾರಗಳನ್ನು ತಿಳಿಸುವಂತಹ ಪುಸ್ತಕವಾದರೆ ಮತ್ತೊಂದು ಅಕ್ಷರ ಜ್ಞಾನವನ್ನು ನೀಡುವಂತಹ ಪುಸ್ತಕ, ಈಗಾಗಲೇ ರಾಜ್ಯದ ಶಾಲೆಗಳಲ್ಲಿ ಚಿಲಿಪಿಲಿ, ನಲಿಕಲಿಯ ಮೂಲಕ ಎನ್ ಇಪಿಯ ಆಶಯಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಶಾಲೆಗಳಲ್ಲಿ ಶೀಘ್ರವೇ ಧ್ಯಾನ, ಯೋಗವನ್ನು ಆರಂಭಿಸಲಾಗುತ್ತದೆ. ನೈತಿಕ ಶಿಕ್ಷಣವನ್ನು ಶಾಲೆಗಳಲ್ಲಿ ಆರಂಭಿಸುವ ಕುರಿತು ತಜ್ಞರು, ಸನ್ಯಾಸಿಗಳ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಹೇಳೋರಿಲ್ಲ, ಕೇಳೋರಿಲ್ಲ: ಮಧ್ಯಪ್ರದೇಶದ ಜಿಲ್ಲಾಸ್ಪತ್ರೆ ಐಸಿಯು ಒಳಗೆ ಹಸು ಓಡಾಟ | WATCH VIDEO